ಆರನೇ ಶ್ರೇಯಾಂಕಿತ ಸ್ಪೇನ್ ನ ಗಾರ್ಬಿನ್ ಮುಗರುಜಾ ಅವರು ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿಯನ್ನು ಚೊಚ್ಚಲಬಾರಿಗೆ ಎತ್ತಿ ಸಂಭ್ರಮಿಸಿದ್ದಾರೆ.
ಮೆಕ್ಸಿಕೋದಲ್ಲಿ ನಡೆದ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಗಾರ್ಬಿನ್ 6-3, 7-5 ರಿಂದ ಆನೆಟ್ಟ್ ಕೊಂಟಾವೀಟ್ ಅವರನ್ನು ಎರಡು ನೇರ ಸೆಟ್ ಗಳಲ್ಲಿ ಮಣಿಸಿ ಮೊದಲ ಬಾರಿಗೆ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಎರಡು ಬಾರಿ ಗ್ರ್ಯಾನ್ ಸ್ಲ್ಯಾಮ್ ವಿಜೇತೆ ಮುಗರುಜಾ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿದರು.
![ಗಾರ್ಬಿನ್ ಮುಗರುಜಾಗೆ ಡಬ್ಲ್ಯುಟಿಎ ಫೈನಲ್ಸ್ ಗರಿ 3 18tennis wta final2 articleLarge](http://sportskarnataka.com/wp-content/uploads/2021/11/18tennis-wta-final2-articleLarge-300x200.jpg)
“ಈ ಪ್ರಶಸ್ತಿಯನ್ನು ಗೆದ್ದಿರುವುದು ನಿಜಕ್ಕೂ ಸಂತಸ ತಂದಿದೆ. ಈ ಟೂರ್ನಿಯ ಆರಂಭದಲ್ಲಿ ನಾನು ಕೊಂಚ ಹಿನ್ನಡೆ ಅನುಭವಿಸಿದ್ದೆ. ನಂತರ ಪಂದ್ಯಗಳನ್ನು ಆಡಿದಂತೆ ಲಯ ಕಂಡುಕೊಂಡೆ. ನನ್ನ ಆಟ ನನಗೆ ಖುಷಿ ನೀಡಿದೆ” ಎಂದು ಪ್ರಶಸ್ತಿ ವಿಜೇತೆ ಗಾರ್ಬಿನ್ ಮುಗರುಜಾ ತಿಳಿಸಿದ್ದಾರೆ.