ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತೀಯ ವನಿತಾ ತಂಡ ಮೊದಲ ಏಕದಿನ ಪಂದ್ಯದಲ್ಲಿ 62 ರನ್ಗಳ ಸೋಲನುಭವಿಸಿದೆ. ಕಿವೀಸ್ ಸೂಝಿ ಬೇಟ್ಸ್ ಸಿಡಿಸಿದ ಶತಕ ಮತ್ತು ಅಮಿ ಸ್ಯಟರ್ವೇಟ್ ಸಿಡಿಸಿದ 63 ರನ್ಗಳ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತು.
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿವೀಸ್ ಮ್ಯಾಡಿ ಗ್ರೀನ್ (17) ಮತ್ತು ಅಮೆಲಿಯ ಕೆರ್ (33) ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದರೆ ಬೇಟ್ಸ್ (106) ಮತ್ತು ಸ್ಯಟರ್ವೇಟ್ (63) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಕೆಳ ಸರದಿಯ ಆಟಗಾರ್ತಿರ ಮೇಲೆ ಭಾರತೀಯ ಬೌಲರ್ಗಳು ಹಿಡಿತ ಸಾಧಿಸಿದರು. ಸೋಫಿ ಡಿವೈನ್ (13), ಲಿಯ ತಹುಹು (8) ಸೇರಿದಂತೆ ಎಲ್ಲರೂ ವೈಫಲ್ಯ ಅನುಭವಿಸಿದರು. ನ್ಯೂಜಿಲೆಂಡ್ 48.1 ಓವರುಗಳಲ್ಲಿ 275 ರನ್ಗಳಿಗೆ ಆಲೌಟ್ ಆಯಿತು.
ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾ ಕೂಡ ಎಡವಿತು. ಮೇಘನಾ (4) ಮತ್ತು ಶಫಾಲಿ ವರ್ಮಾ (12) ಬೇಗನೆ ಔಟಾದರು. ಯಸ್ತಿಕಾ ಭಾಟಿಯಾ (41) ಮತ್ತು ನಾಯಕಿ ಮಿಥಾಲಿ ರಾಜ್ (59) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಹರ್ಮನ್ ಪ್ರಿತ್ ಕೌರ್ (10), ರಿಚಾ (22), ದೀಪ್ತಿ (16), ಪೂಜಾ (23) ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಭಾರತ 49.4 ಓವರುಗಳಲ್ಲಿ 213 ರನ್ಗಳಿಗೆ ಆಲೌಟ್ ಆಗಿ 62 ರನ್ಗಳ ಸೋಲನುಭವಿಸಿತು. ಕಿವೀಸ್ ಪರ ಜೆಸ್ಕೆರ್ 4 ವಿಕೆಟ್ ಪಡೆದು ಮಿಂಚಿದರು.