ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತೆ ಮೈದಾನಕ್ಕಿಳಿಯಲಿದ್ದಾರೆ. ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಸೌರಾಷ್ಟ್ರ ಸ್ಟಾರ್ ಇದಕ್ಕೂ ಮುನ್ನ ರಣಜಿ ಟೂರ್ನಿ ಆಡಲಿದ್ದಾರೆ.
ಮಂಗಳವಾರ ಚೆನ್ನೈನಲ್ಲಿ ಆತಿಥೇಯ ತಮಿಳುನಾಡು ವಿರುದ್ಧ ಸೌರಾಷ್ಟ್ರ ಪರ ರಣಜಿ ಆಡಲಿದ್ದಾರೆ.
ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಕಳೆದ ವರ್ಷ ಕೊನೆಯ ಬಾರಿಗೆ ಏಷ್ಯಾಕಪ್ ಆಡಿದ್ದರು.ಗಾಯದ ಸಮಸ್ಯೆಗೆ ಗುರಿಯಾಗಿದ್ದ ರವೀಂದ್ರ ಜಡೇಜಾ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು.
ಸದ್ಯ ರವೀಂದ್ರ ಜಡೇಜಾ ಬೆಂಗಳೂರಿನ ಎನ್ ಸಿಎ ಅಕಾಡೆಮಿಯಲ್ಲಿ ಪುನರ್ವಸತಿ ಪಡೆಯುತ್ತಿದ್ದರು.
ಜಡೇಜಾ 2022 ಆಗಸ್ಟ್ ಅಂದು ಕೊನೆಯ ಬಾರಿಗೆ ಟೆಸ್ಟ್ ಆಡಿದ್ದರು.
ಆಸ್ಟ್ರೇಲಿಯಾ ವಿರುದ್ದದ ಎರಡು ಟೆಸ್ಟ್ ಪಂದ್ಯದಕ್ಕೆ ಜಡ್ಡು ಆಯ್ಕೆಯಾಗಿದ್ದಾರೆ. ಆದರೆ ಫಿಟ್ನೆಸ್ ವಿಚಾರ ತುಂಬ ಮುಖ್ಯವಾಗಿದೆ.ಎನ್ಸಿಎ ರವೀಂದ್ರ ಜಡೇಜಾ ಅವರು ಫಿಟ್ ಆಗಿದ್ದಾರೆ ಎಂದು ಹೇಳಿದೆ.
ಫೆ.9ರಿಂದ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಫೆ.17ರಿಂದ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಎರಡನೆ ಟೆಸ್ಟ್ ನಡೆಯಲಿದೆ.