ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂದು ತವರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.
ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತವರಿನಲ್ಲಿ ಕಠಿಣ ಸವಾಲು ಎದುರಿಸಲಿದೆ. ಮೊನ್ನೆ ಡೆಲ್ಲಿ ವಿರುದ್ಧ ಗೆಲ್ಲುವ ಮೂಲಕ ಸತತ ಸೋಲುಗಳಿಗೆ ಬ್ರೇಕ್ ಹಾಕಿತ್ತು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸನ್ರೈಸರ್ಸ್ ಹೈದ್ರಾಬಾದ್ಗೆ ಭಾರೀ ಪೈಪೋಟಿ ನೀಡಿ ಸೋತಿತ್ತು.
ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರೂ ಇಂದಿನ ಪಂದ್ಯಕ್ಕೂ ಮುನ್ನ ಒತ್ತಡದಲ್ಲಿ ಸಿಲುಕಿದೆ. ಪ್ರಸಕ್ತ ಐಪಿಎಲ್ನಲ್ಲಿ ರೋಹಿತ್ ಪಡೆ ಅಸಲಿ ತಾಕತ್ತನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ.
ಉತ್ತಮ ರನ್ ರೇಟ್ (0.711)ನೊಂದಿಗೆ 2 ಗೆಲುವು 2 ಸೋಲುಗಳೊಂದಿಗೆ ಕೋಲ್ಕತ್ತಾ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನ ಪಡೆದಿದೆ. ಮುಂಬೈ ಇಂಡಿಯನ್ಸ್ -0.879 ನೆಟ್ ರನ್ ರೇಟ್ನೊಂದಿಗೆ ಎರಡು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಡೆಲ್ಲಿ ವಿರುದ್ಧ 65 ರನ್ ಹೊಡೆದ ನಾಯಕ ರೋಹಿತ್ ಶರ್ಮಾ ಸ್ಥಿರತೆಯನ್ನು ಕಾಪಡಿಕೊಳ್ಳಬೇಕಿದೆ. ಸೂರ್ಯ ಕುಮಾರ್ ವೈಫಲ್ಯದ ಮೇಲೆ ವೈಫಲ್ಯ ಅನುಭವಿಸುತ್ತಿದ್ದಾರೆ.
ವೇಗಿ ಜೋಫ್ರಾ ಆರ್ಚರ್ ಆಡುವುದು ಅನುಮಾನದಿಂದ ಕೂಡಿದೆ. ಇತರೆ ವೇಗಿಗಳಾದ ಜಾಸನ್ ಬೆಹ್ರೆನ್ ಡ್ರಾಫ್ ರೀಲಿ ಮೆರ್ಡಿತ್ ಬೌಲಿಂಗ್ ಜವಾಬ್ದಾರಿಯನ್ನು ಹೊರಬೇಕಿದೆ. ಪಿಯೂಷ್ ಚಾವ್ಲಾ ಕಳೆದ ಪಂದ್ಯದಲ್ಲಿ 22ಕ್ಕೆ 3 ವಿಕೆಟ್ ಪಡೆದಿದ್ದರು.
ಮುಂಬೈ ಇಂಡಿಯನ್ಸ್ ತಂಡ ಟಿಮ್ ಡೇವಿಡ್, ಕ್ಯಾಮರೊನ್ ಗ್ರೀನ್, ತಿಲಕ್ ವರ್ಮಾ ಮತ್ತು ಇಶಾನ್ ಕಿಶನ್ ಸೋಟಕ ಬ್ಯಾಟಿಂಗ್ ಮಾಡಬೇಕಿದೆ. ಕೋಲ್ಕತ್ತಾ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕವಾಗಿ ಗೆದ್ದಿತ್ತು. ನಂತರ ಸನ್ರೈಸರ್ಸ್ ವಿರುದ್ಧ ಕೊನೆಯ ಎಸೆತದವರೆಗೂ ಹೋರಾಡಿತ್ತು.
ರಿಂಕು ಸಿಂಗ್ ಮುಂಬೈ ತಂಡಕ್ಕೆ ದೊಡ್ಡ ಸವಾಲಾಗಿದ್ದಾರೆ. 7ನೇ ಕ್ರಮಾಂಕದಲ್ಲಿ ರಿಂಕು ಸಿಂಗ್ ಅಜೇಯ 48 ಮತ್ತು ಅಜೇಯ 58 ರನ್ ಹೊಡೆದಿದ್ದಾರೆ.
ನಾಯಕ ನಿತೀಶ್ ರಾಣಾ, ವೆಂಕಟೇಶ್ ಅಯ್ಯರ್, ರೆಹಾಮಾನ್ಹುಲ್ಲಾ ಗುರ್ಬಾಜ್ ಮತ್ತು ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ಜವಾಬ್ದಾರಿ ಹೊರ ಬೇಕಿದೆ. ಮುಂಬೈ ಎಲ್ಲಾ ವಿಭಾಗಗಳಲ್ಲೂ ಯಶಸ್ಸು ಕಾಣಬೇಕಿದೆ.
ಡೆತ್ ಓವರ್ಗಳಲ್ಲಿ ಅಬ್ಬರಿಸುತ್ತಿರುವ ರಿಂಕು ಸಿಂಗ್ 5 ಬೌಂಡರಿ 10 ಸಿಕ್ಸರ್ ಸಿಡಿಸಿದ್ದಾರೆ ಮತ್ತೊಮ್ಮೆ ಎಲ್ಲರ ಕೇಂದ್ರ ಬಿಂದುವಾಗಲಿದ್ದಾರೆ.
ಆಲ್ರೌಂಡರ್ ಆ್ಯಂಡ್ರೆ ರಸೆಲ್ ರನ್ ಗಳಿಸಲು ಪರದಾಡುತ್ತಿದ್ದು ತಂಡಕ್ಕೆ ಚಿಂತೆಯಾಗಿದೆ. ಸನ್ರೈಸರ್ಸ್ ವಿರುದ್ಧ ಗಾಯಗೊಂಡು ಹೊರ ನಡೆದಿದ್ದರು.
ಕೋಲ್ಕತ್ತಾ ತಂಡ ಜಾಸನ್ ರಾಯ್ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸಕೊಳ್ಳಲು ಅವಕಾಶವಿದೆ. ಸುನಿಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ತಂಡದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ್ದಾರೆ. ಬಾಂಗ್ಲಾ ವಿಕೆಟ್ ಕೀಪರ್ ಲಿಟನ್ ದಾಸ್ ತಂಡವನ್ನು ಸೇರಿಕೊಂಡಿದ್ದಾರೆ.