ಐಪಿಎಲ್ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿರುವ ಮಹೇಂದ್ರ ಸಿಂಗ್ ಧೋನಿ, ಐದು ಸಾವಿರ ರನ್ಗಳಿಸುವ ಮೂಲಕ IPLನಲ್ಲಿ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ಎನಿಸಿದ್ದಾರೆ.
ಚೆನ್ನೈನ ಚೆಪಾಕ್ನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಈ ಸಾಧನೆ ಮಾಡಿದರು. 6ನೇ ಕ್ರಮಾಂಕದಲ್ಲಿ ಬಂದ ಧೋನಿ ಕೇವಲ 3 ಬಾಲ್ಗಳಲ್ಲಿ ಎರಡು ಸಿಕ್ಸರ್ ಸಹಿತ 12 ರನ್ಗಳಿಸಿ ಅಬ್ಬರಿಸಿದರು. ಈ ಪ್ರದರ್ಶನದಿಂದ ಐದು ಸಾವಿರ ರನ್ಗಳನ್ನ ಪೂರೈಸಿದ ಹಿರಿಮ ತಮ್ಮದಾಗಿಸಿಕೊಂಡರು. ಅಲ್ಲದೇ ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಐದು ಸಾವಿರ ರನ್ಗಳ ಪೂರೈಸಿದ ಭಾರತದ 5ನೇ ಬ್ಯಾಟರ್ ಹಾಗೂ ವಿಶ್ವದ 7ನೇ ಬ್ಯಾಟ್ಸ್ಮನ್ ಎನಿಸಿದರು.
ಐಪಿಎಲ್ನಲ್ಲಿ ಭಾರತದ ಪರ ಈವರೆಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಸುರೇಶ್ ರೈನಾ ಅವರುಗಳು ಐದು ಸಾವಿರ ರನ್ಗಳನ್ನ ಪೂರೈಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ(6706 ರನ್ಗಳು) ಐಪಿಎಲ್ ಟೂರ್ನಿಯಲ್ಲಿ ಈವರೆಗೂ ಅತ್ಯಧಿಕ ರನ್ಗಳಿಸಿದ ಹೆಗ್ಗಳಿಕೆ ಪಡೆದಿದ್ದಾರೆ.
ಎಂಎಸ್ ಧೋನಿ ಐಪಿಎಲ್ನಲ್ಲಿ ಈವರೆಗೂ 235 ಪಂದ್ಯಗಳನ್ನು ಆಡಿರುವ ಮಹೇಂದ್ರ ಸಿಂಗ್ ಧೋನಿ, 39ರ ಬ್ಯಾಟಿಂಗ್ ಸರಾಸರಿಯಲ್ಲಿ 5004* ರನ್ಗಳಿಸಿದ್ದು, ತಮ್ಮ ಖಾತೆಗೆ ಇನ್ನಷ್ಟು ರನ್ಗಳಿಸುವ ನಿರೀಕ್ಷೆ ಮೂಡಿಸಿದ್ದಾರೆ. ಅಲ್ಲದೇ ಧೋನಿ ಬಹುತೇಕ ರನ್ಗಳನ್ನ ಮಧ್ಯಮ ಕ್ರಮಾಂಕದಲ್ಲಿ ಕಲೆಹಾಕಿರುವುದು ವಿಶೇಷ. ಬ್ಯಾಟಿಂಗ್ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ನಲ್ಲೂ ಮಿಂಚಿರುವ ಧೋನಿ, ಈವರೆಗೂ 170 ಡಿಸ್ಮಿಸಲ್ ಪಡೆದಿರುವ ದಾಖಲೆ ಹೊಂದಿದ್ದಾರೆ.
IPL 2023, MS Dhoni, Chennai Super Kings, Lucknow Super Giants, Sports Karnataka