ಐಪಿಎಲ್ನಲ್ಲಿ ತಮ್ಮ ಬ್ಯಾಟಿಂಗ್ನಿಂದ ಅಬ್ಬರಿಸಿರುವ ಕನ್ನಡಿಗ ಕೆಎಲ್ ರಾಹುಲ್ ನಾಯಕನಾಗಿ ವೇಗವಾಗಿ 2000 ರನ್ಗಳಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ.
ಲಕ್ನೋ ತಂಡದ ನಾಯಕನಾಗಿರುವ ಕೆಎಲ್ ರಾಹುಲ್, ತಮ್ಮ 47ನೇ ಇನ್ನಿಂಗ್ಸ್ನಲ್ಲಿ ಈ ಸಾಧನೆ ಮಾಡಿದರು. ಲಕ್ನೋದಲ್ಲಿ ಶನಿವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದರು. ಪಂಜಾಬ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್(74 ರನ್, 56 ಬಾಲ್, 8 ಬೌಂಡರಿ, 1 ಸಿಕ್ಸ್) ತಂಡಕ್ಕೆ ಆಸರೆಯಾದರು.
ಈ ಇನ್ನಿಂಗ್ಸ್ನೊಂದಿಗೆ ಕೆಎಲ್ ರಾಹುಲ್, ಐಪಿಎಲ್ನಲ್ಲಿ ನಾಯಕನಾಗಿ ವೇಗವಾಗಿ 2000 ರನ್ಗಳಿಸುವ ಮೂಲಕ ವಿರಾಟ್ ಕೊಹ್ಲಿ ದಾಖಲೆ ಮುರಿದರು. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ಯಾಪ್ಟನ್ ಆಗಿದ್ದ ವಿರಾಟ್ ಕೊಹ್ಲಿ, 59ನೇ ಇನ್ನಿಂಗ್ಸ್ನಲ್ಲಿ 2000 ರನ್ ಪೂರೈಸಿದ್ದರು. ಅಲ್ಲದೇ ಇದೇ ಪಂದ್ಯದಲ್ಲಿ ಕ್ರಿಸ್ ಗೇಯ್ಲ್ ದಾಖಲೆಯನ್ನ ಸಹ ಮುರಿದ ರಾಹುಲ್, ಐಪಿಎಲ್ನಲ್ಲಿ ವೇಗವಾಗಿ 4000 ರನ್ಗಳನ್ನ ಪೂರೈಸಿದರು. ಕೆಎಲ್ ರಾಹುಲ್ ತಮ್ಮ 105ನೇ ಐಪಿಎಲ್ ಇನ್ನಿಂಗ್ಸ್ನಲ್ಲಿ ಈ ದಾಖಲೆ ಬರೆದರು.
ಕನ್ನಡಿಗ ಕೆಎಲ್ ರಾಹುಲ್ ಅವರ ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 2 ವಿಕೆಟ್ಗಳ ಸೋಲಿನ ಆಘಾತ ಅನುಭವಿಸಿತು.
IPL 2023, KL Rahul, Virat Kohli, Lucknow Super Giants