ಐಪಿಎಲ್ ಟೂರ್ನಿಯ ಆರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ಪ್ರಬಲ ಪೈಪೋಟಿಗೆ ಸಜ್ಜಾಗಿದ್ದು, ಚೆನ್ನೈನ ಚೆಪಾಕ್ ಅಂಗಳದಲ್ಲಿ ನಡೆಯುವ ಪಂದ್ಯಕ್ಕಾಗಿ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಇಂದಿನ ಪಂದ್ಯದಲ್ಲಿ ಎರಡು ತಂಡದ ಪ್ರಮುಖ ಮೂವರು ಆಟಗಾರರು ಟಿ20 ಕ್ರಿಕೆಟ್ನ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. CSK ಮತ್ತು LSG ನಡುವಿನ ಪಂದ್ಯದ ಮುರಿಯಬಹುದಾದ ಮೂರು ಸಂಭವನೀಯ ದಾಖಲೆಗಳು ಇಂತಿವೆ.
5000 ಕ್ಲಬ್ನತ್ತ ಧೋನಿ:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕ್ಯಾಪ್ಟನ್ ಎಂಎಸ್ ಧೋನಿ, ಇಂದಿನ ಪಂದ್ಯದಲ್ಲಿ 5000 ರನ್ ಪೂರೈಸುವ ಅವಕಾಶ ಹೊಂದಿದ್ದಾರೆ. IPLನಲ್ಲಿ ಈವರೆಗೂ ಆಡಿರುವ 207 ಇನ್ನಿಂಗ್ಸ್ಗಳಲ್ಲಿ 4992 ರನ್ಗಳಿಸಿರುವ ಕೂಲ್ ಕ್ಯಾಪ್ಟನ್ ಧೋನಿ, ಇಂದಿನ ಪಂದ್ಯದಲ್ಲಿ 8 ರನ್ಗಳಿಸಿದರೆ 5000 ರನ್ಗಳ ಕ್ಲಬ್ ಸೇರಲಿದ್ದು, ಈ ಸಾಧನೆ ಮಾಡಿದ ಪೂರ್ಣ ಪ್ರಮಾಣದ ಮೊದಲ ವಿಕೆಟ್ ಕೀಪರ್ ಎನಿಸಿಕೊಳ್ಳಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಸಿಎಸ್ಕೆ ಬ್ಯಾಟಿಂಗ್ ಶಕ್ತಿಯಾಗಿರುವ ಧೋನಿ, 3000ಕ್ಕೂ ಹೆಚ್ಚು ರನ್ಗಳನ್ನ ಕಲೆ ಹಾಕಿರುವುದು ವಿಶೇಷ.
350ನೇ ಐಪಿಎಲ್ ಬೌಂಡರಿ:
ಸಿಎಸ್ಕೆ ತಂಡದ ಸ್ಪೋಟಕ ಬ್ಯಾಟ್ಸ್ಮನ್ ಅಂಬಟಿ ರಾಯುಡು, IPlನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಬಾರಿಯ ಸೀಸನ್ನ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ವಿರುದ್ಧದ ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ರಾಯುಡು ವಿಫಲವಾಗಿದ್ದರು. ಆದರೆ 37 ವರ್ಷದ ರಾಯುಡು ಹಲವು ಅವಿಸ್ಮರಣೀಯ ಇನ್ನಿಂಗ್ಸ್ಗಳ ಮೂಲಕ ಚೆನ್ನೈ ತಂಡಕ್ಕೆ ನೆರವಾಗಿದ್ದು, ಇಂದು ನಡೆಯುವ ಲಕ್ನೋ ವಿರುದ್ಧದ ಪಂದ್ಯದಲ್ಲಿ ಒಂದು ಬೌಂಡರಿ ಬಾರಿಸಿದರೆ ಐಪಿಎಲ್ನಲ್ಲಿ 350 ಬೌಂಡರಿಗಳನ್ನ ಪೂರೈಸಲಿದ್ದಾರೆ. IPLನ ಇತಿಹಾಸದಲ್ಲಿ ಕೇವಲ ಒಂಭತ್ತು ಮಂದಿ ಭಾರತೀಯ ಆಟಗಾರರು ಈ ದಾಖಲೆ ಹೊಂದಿದ್ದಾರೆ.
T20ಯಲ್ಲಿ 2000 ರನ್ಗಳು:
ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೊದಲ ಪಂದ್ಯದ ಗೆಲುವಿನ ಹೀರೋ ಕೈಲ್ ಮೈಯರ್ಸ್, ಸಿಎಸ್ಕೆ ವಿರುದ್ಧ ಮತ್ತೊಂದು ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಪೋಟಕ ಆಡವಾಡಿದ ಮೈಯರ್ಸ್, 38 ಬಾಲ್ಗಳಲ್ಲಿ 73 ರನ್ಗಳಿಸಿ ಮಿಂಚಿದ್ದರು. ಚೆನ್ನೈ ವಿರುದ್ಧ ಇಂದು ನಡೆಯುವ 66 ರನ್ಗಳಿಸಿದರೆ ಟಿ20 ಕ್ರಿಕೆಟ್ನಲ್ಲಿ 2000 ರನ್ಗಳನ್ನ ಪೂರೈಸಲಿದ್ದಾರೆ. ವೆಸ್ಟ್ ಇಂಡೀಸ್ ಆಟಗಾರ ಈವರೆಗು 105 ಟಿ20 ಪಂದ್ಯಗಳಲ್ಲಿ 21.25ರ ಸರಾಸರಿ ಹಾಗೂ 125.4ರ ಸ್ಟ್ರೈಕ್ ರೇಟ್ ಮೂಲಕ 1934 ರನ್ಗಳಿಸಿದ್ದಾರೆ.
IPL 2023, Chennai Super Kings, Lucknow Super Giants, CSK v LSG, MS Dhoni, KL Rahul