ಎರಡು ಗೆಲುವುಗಳೊಂದಿಗೆ ಟೂರ್ನಿ ಆರಂಭಿಸಿದ ಕೋಲ್ಕತ್ತಾ ನೈಟ್ ರೈಡರ್ಸ್ ನಂತರ ಸೋಲಿ ಹಾದಿ ಹಿಡಯಿತು. ಸತತ 3 ಪಂದ್ಯಗಳನ್ನು ಸೋತು ನಿರಾಸೆ ಅನುಭವಿಸಿದೆ. ಭಾರೀ ಒತ್ತಡದಲ್ಲಿರುವ ಕೋಲ್ಕತ್ತಾ ಭಾನುವಾರ ಚೆನ್ನೈ ತಂಡವನ್ನು ಎದುರಿಸಲಿದೆ.
ಈ ಆವೃತ್ತಿಯಲ್ಲಿ 6 ಪಂದ್ಯಗಳನ್ನಾಡಿರುವ ಕೋಲ್ಕತ್ತಾ ಸೂಕ್ತ ಹನ್ನೊಂದರ ಬಳಗವನ್ನು ಹುಡುಕುವಲ್ಲಿ ವಿಫಲವಾಗಿದೆ. ಆಡಿದ 6 ಪಂದ್ಯಗಳಲ್ಲಿ 4 ವಿವಿಧ ಜೋಡಿಗಳೊಂದಿಗೆ ಕಣಕ್ಕಿಳಿದಿದೆ.
ಮಧ್ಯಮ ಕ್ರಮಾಂಕವೂ ದುರ್ಬಲವಾಗಿದ್ದು ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ಬೌಲಿಂಗ್ ಕೂಡ ತಂಡದ ಸಮಸ್ಯೆಯಾಗಿದೆ.6 ಪಂದ್ಯಗಳಲ್ಲಿ ವೇಗಿಗಳು 9 ವಿಕೆಟ್ ಪಡೆದಿದ್ದಾರೆ.11.3 ರನ್ ರೇಟ್ನಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಇನ್ನು ಚೆನ್ನೈ ತಂಡ ತನ್ನ ಸಮಸ್ಯೆಯನ್ನು ಮೀರಿ ಪ್ರದರ್ಶನ ನೀಡುತ್ತಿದೆ.ಸಂಘಟಿತ ಆಟದಿಂದ ಗೆಲುವನ್ನು ಸಂಪಾದಿಸುತ್ತಿದೆ. ಡೆವೊನ್ ಕಾನ್ವೆ ಸತತ 3 ಅರ್ಧ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.