3ನೇ ದಿನವೇ ನ್ಯೂಜಿಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ್ದ ಬಾಂಗ್ಲಾದೇಶ 4ನೇ ದಿನ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು. ಮೆಹದಿ ಹಸನ್ ಮತ್ತು ಯಾಸಿರ್ 4ನೇ ದಿನದ ಆರಂಭದಲ್ಲಿ ಬಾಂಗ್ಲಾದೇಶದ ಮುನ್ನಡೆಯನ್ನು ಹೆಚ್ಚಿಸಿದರು. ಹಸನ್ 47 ರನ್ಗಳಿಸಿ ಔಟಾದರು. ಯಾಸಿರ್ 26 ರನ್ಗಳಿಸಿದ್ದು ಮುನ್ನಡೆಯನ್ನು ಹೆಚ್ಚಿಸಿತು. ಅಂತಿಮವಾಗಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನಲ್ಲಿ 458 ರನ್ಗಳಿಗೆ ಆಲೌಟ್ ಆಯಿತು.
130 ರನ್ಗಳ ಹಿನ್ನಡೆಯಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ಗೆ ಆರಂಭದಲ್ಲೇ ಆಘಾತ ಎದುರಾಯಿತು. ಟಾಮ್ ಲೇಥಮ್ 14 ರನ್ಗಳಿಸಿದರೆ, ಡೆವೊನ್ ಕಾನ್ವೆ 13 ರನ್ಗಳಿಸಿ ಪವೆಲಿಯನ್ ಸೇರಿಕೊಂಡರು. ಆದರೆ ವಿಲ್ ಯಂಗ್ ಮತ್ತು ರಾಸ್ ಟೇಲರ್ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಆಧಾರವಾದರು. ಆದರೆ ದಿನದ ಕೊನೆಯ ಹಂತದಲ್ಲಿ 69 ರನ್ಗಳಿಸಿದ ಯಂಗ್ ಔಟಾದರು. ಅದಾದ ಬಳಿಕ ಹೆನ್ರಿ ನಿಕೊಲಸ್ ಮತ್ತು ಟಾಮ್ ಬ್ಲಂಡಲ್ ಖಾತೆಯದೆ ಔಟಾಗಿದ್ದು ಕಿವೀಸ್ಗೆ ಶಾಕ್ ನೀಡಿತು. ದಿನದ ಅಂತ್ಯಕ್ಕೆ ಕಿವೀಸ್ ದಿನದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 147 ರನ್ಗಳಿಸಿದೆ. 2ನೇ ಇನ್ನಿಂಗ್ಸ್ನಲ್ಲಿ ಕೇವಲ 17 ರನ್ಗಳ ಮುನ್ನಡೆ ಪಡೆದಿರುವ ನ್ಯೂಜಿಲೆಂಡ್ಗೆ ಅನುಭವಿ ರಾಸ್ ಟೇಲರ್ ಮಾತ್ರ ಆಧಾರವಾಗಿದ್ದಾರೆ.