ಏಷ್ಯನ್ ಗೇಮ್ಸ್ನ ಮಂಗೋಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ನೇಪಾಳ, ಆ ಮೂಲಕ ಟಿ20 ಕ್ರಿಕೆಟ್ನಲ್ಲಿ ಹಲವು ದಾಖಲೆ ಬರೆದು ಇತಿಹಾಸ ನಿರ್ಮಿಸಿದೆ.
ಹ್ಯಾಂಗ್ಝೌದ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 314 ರನ್ಗಳ ಬೃಹತ್ ಮೊತ್ತ ಕಲೆಹಾಕುವ ಮೂಲಕ ಟಿ20ಯಲ್ಲಿ 300ಕ್ಕೂ ಹೆಚ್ಚು ರನ್ಗಳಿಸಿದ ವಿಶ್ವದ ಮೊದಲ ತಂಡವೆಂಬ ಹೆಗ್ಗಳಿಕೆ ಪಡೆಯುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ಗಳಿಸಿ ವಿಶ್ವ ದಾಖಲೆ ನಿರ್ಮಿಸಿದೆ.
ವೇಗದ ಶತಕ ಸಿಡಿಸಿದ ಮಲ್ಲಾ:
ನೇಪಾಳ ವಿರುದ್ಧ ಸ್ಪೋಟಕ ಆಟವಾಡಿದ 19 ವರ್ಷದ ಎಡಗೈ ಬ್ಯಾಟರ್ ಕುಶಾಲ್ ಮಲ್ಲಾ,(137* ರನ್, 50 ಬಾಲ್, 12 ಸಿಕ್ಸ್, 8 ಬೌಂಡರಿ) ಅಬ್ಬರದ ಆಟವಾಡಿ ಮಿಂಚಿದರು. ಈ ಇನ್ನಿಂಗ್ಸ್ನಲ್ಲಿ ಕೇವಲ 34 ಬಾಲ್ಗಳಲ್ಲಿ ಶತಕ ಬಾರಿಸಿದ ಮಲ್ಲಾ, ಆ ಮೂಲಕ ಡೇವಿಡ್ ಮಿಲ್ಲರ್ ಮತ್ತು ರೋಹಿತ್ ಶರ್ಮಾ ಅವರ ಜಂಟಿ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದಾರೆ.
ಯುವರಾಜ್ ದಾಖಲೆ ಉಡೀಸ್:
ನೇಪಾಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ದಿಪೇಂದ್ರ ಸಿಂಗ್, 10 ಬಾಲ್ಗಳಲ್ಲಿ 8 ಸಿಕ್ಸ್ ನೆರವಿನಿಂದ 52* ರನ್ಗಳಿಸಿ ಅಬ್ಬರಿಸಿದರು. ತಮ್ಮ ಈ ಇನ್ನಿಂಗ್ಸ್ನಲ್ಲಿ 9 ಬಾಲ್ಗಳಲ್ಲಿ ಅರ್ಧಶತಕ ಬಾರಿಸಿದ ದೀಪೇಂದ್ರ ಸಿಂಗ್, ಆ ಮೂಲಕ ಟಿ20 ಕ್ರಿಕೆಟ್ನಲ್ಲಿ 12 ಬಾಲ್ಗಳಲ್ಲಿ ಅರ್ಧಶತಕ ಬಾರಿಸಿದ್ದ ಯುವರಾಜ್ ಸಿಂಗ್ ದಾಖಲೆ ಮುರಿದರು. ಈ ಹಿಂದೆ 2007ರ ಟಿ20 ವಿಶ್ವಕಪ್ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ 12 ಬಾಲ್ಗಳಲ್ಲಿ ಅರ್ಧಶತಕ ಬಾರಿಸಿದ್ದರು. ಅಲ್ಲದೇ 520ರ ಸ್ಟ್ರೈಕ್ ರೇಟ್ನೊಂದಿಗೆ ರನ್ಗಳಿಸಿದ ದೀಪೇಂದ್ರ ಸಿಂಗ್, ಆ ಮೂಲಕ ಹೊಸ ದಾಖಲೆ ಬರೆದರು.
ತಮ್ಮ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 26 ಸಿಕ್ಸ್ಗಳನ್ನ ಬಾರಿಸಿದ ನೇಪಾಳ ಆ ಮೂಲಕ ಇನ್ನಿಂಗ್ಸ್ವೊಂದರಲ್ಲಿ ಗರಿಷ್ಠ ಸಿಕ್ಸರ್ ದಾಖಲಿಸಿದ ತಂಡ ಎಂಬ ಹೆಗ್ಗಳಿಕೆ ಪಡೆದಿದೆ. ಬೌಲಿಂಗ್ನಲ್ಲೂ ಉತ್ತಮ ಪ್ರದರ್ಶನ ನೀಡಿ ಮಂಗೋಲಿಯಾ ತಂಡವನ್ನ 41 ರನ್ಗಳಿಗೆ ಆಲೌಟ್ ಮಾಡಿದ ನೇಪಾಳ ಆ ಮೂಲಕ 273 ರನ್ಗಳ ಭಾರೀ ಅಂತರದ ಗೆಲುವು ಸಾಧಿಸಿ ದಾಖಲೆ ಬರೆದಿದೆ.
Asian Games, Nepal, Mongolia, T20I Cricket, Sports Karnataka