ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಕಮ್ಬ್ಯಾಕ್ ಮಾಡಿರುವ ವಿಕೆಟ್-ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ನಾಯಕನಾಗಿ ತಂಡವನ್ನ ಮುನ್ನಡೆಸಲು ಸಜ್ಜಾಗಿದ್ದಾರೆ.
ಆಸೀಸ್ ವಿರುದ್ಧದ ಮೂರು ಪಂದ್ಯಗಳ ಈ ಸರಣಿ ಮುಂಬರುವ ಏಕದಿನ ವಿಶ್ವಕಪ್ಗೆ ಅಂತಿಮ ಸಿದ್ಧತೆಯಾಗಿದ್ದು, ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಕನ್ನಡಿಗ ಕೆಎಲ್ ರಾಹುಲ್ಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಇತ್ತೀಚೆಗಷ್ಟೇ ತಂಡಕ್ಕೆ ಅತ್ಯುತ್ತಮ ಕಮ್ಬ್ಯಾಕ್ ಮಾಡಿರುವ ರಾಹುಲ್, ಆಸೀಸ್ ವಿರುದ್ಧದ ಸರಣಿಯಲ್ಲಿ ಭಾರತ ತಂಡಕ್ಕೆ ಯಶಸ್ಸು ತಂದುಕೊಡುವ ಲೆಕ್ಕಾಚಾರದಲ್ಲಿದ್ದಾರೆ.
ಟೀಂ ಇಂಡಿಯಾ ನಾಯಕನಾಗಿ ಈವರೆಗೂ 7 ಪಂದ್ಯಗಳನ್ನ ತಂಡವನ್ನ ಮುನ್ನಡೆಸಿರುವ ಕೆಎಲ್ ರಾಹುಲ್, ಇದರಲ್ಲಿ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 3 ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿದ್ದಾರೆ. ಅಲ್ಲದೇ ಕನ್ನಡಿಗ ರಾಹುಲ್ ಇದೇ ಮೊದಲ ಬಾರಿಗೆ ತವರಿನಲ್ಲಿ ODI ತಂಡದ ನಾಯಕನಾಗಿ ಭಾರತ ತಂಡವನ್ನ ತವರಿನಲ್ಲಿ ಮುನ್ನಡೆಸುತ್ತಿದ್ದಾರೆ. ಈ ಹಿಂದೆ ತವರಿನ ಹೊರಗೆ ನಡೆದ ಸರಣಿಗಳಲ್ಲಿ ರಾಹುಲ್, ನಾಯಕನಾಗಿ ಟೀಂ ಇಂಡಿಯಾವನ್ನ ಮುನ್ನಡೆಸಿದ್ದರು.
ಈ ಹಿಂದೆ 2022ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಮೂರು ಪಂದ್ಯಗಳ ಸರಣಿಯಲ್ಲಿ ರಾಹುಲ್, ನಾಯಕನಾಗಿ ತಂಡವನ್ನ ಮುನ್ನಡೆಸಿದ್ದರು. ಆದರೆ ತಮ್ಮ ನಾಯಕತ್ವದ ಮೊದಲ ಪ್ರಯತ್ನದಲ್ಲೇ 0-3 ಅಂತರದಲ್ಲಿ ಸರಣಿ ಸೋಲಿನ ಆಘಾತ ಕಂಡಿದ್ದರು. ನಂತರ ಜಿಂಬಾಬ್ವೆ ವಿರುದ್ಧ 3-0 ಅಂತರದಲ್ಲಿ ತಂಡಕ್ಕೆ ಗೆಲುವಿನ ಯಶಸ್ಸು ತಂದುಕೊಟ್ಟಿದ್ದರು. ಬಳಿಕ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲೂ ತಂಡವನ್ನ ಗೆಲುವಿನ ದಡಸೇರಿಸಿದ್ದರು.
ODI ನಾಯಕನಾಗಿ ಕೆಎಲ್ ರಾಹುಲ್:
2022 – ಸೌತ್ ಆಫ್ರಿಕಾ ವಿರುದ್ಧ 0-3 ಅಂತರದ ಸೋಲು
2022 – ಜಿಂಬಾಬ್ವೆ ವಿರುದ್ಧ 3-0 ಅಂತರದ ಗೆಲುವು
2022 – ಬಾಂಗ್ಲಾದೇಶ ವಿರುದ್ಧ 1-0 ಅಂತರದ ಗೆಲುವು
ODIನಲ್ಲಿ ರಾಹುಲ್ ಬ್ಯಾಟಿಂಗ್ ದಾಖಲೆ:
ನಾಯಕನಾಗಿ: ಪಂದ್ಯ – 7, ರನ್ಗಳು – 115, ಸರಾಸರಿ – 19.16, 50s-1
V ಆಸ್ಟ್ರೇಲಿಯಾ: ಪಂದ್ಯ – 11, ರನ್ಗಳು – 392, ಸರಾಸರಿ – 43.55, 50s-3
ಭಾರತದಲ್ಲಿ: ಪಂದ್ಯ – 20, ರನ್ಗಳು – 833, ಸರಾಸರಿ – 49.00, 50s-5, 100s-2
IND v AUS, Team India, KL Rahul, Sports Karnataka