ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಐಪಿಎಲ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅಳವಡಿಸಲು ತೀರ್ಮಾನಿಸಲಾಗಿದೆ.
ಶುಕ್ರವಾರ ಬಿಸಿಸಿಐ ವಿಶೇಷ ಸಭೆ ನಡೆದಿದ್ದು ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಐಪಿಎಲ್ನ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಅಳವಡಿಸಲು ವಿಶೇಷ ಸಭೆ ಅನುಮೋದನೆ ನೀಡಿತು.
ಕಳೆದ ಬಾರಿ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಅಳವಡಿಸಲಾಗಿತ್ತು.ಆದರೆ 14ನೇ ಓವರ್ ಓಳಗೆ ಮಾತ್ರ ಅಳವಡಿಸಲಾಗಿತ್ತು. ಮುಂದಿನ ಆವೃತ್ತಿಯಿಂದ ಐಪಿಎಲ್ನಂತೆ ನಿಯಮ ಬದಲಾಗಲಿದೆ. ಟಾಸ್ಗೂ ಮುನ್ನ ತಂಡಗಳಿಗೆ ನಾಲ್ಕು ಹೆಚ್ಚುವರಿ ಆಟಗಾರರನ್ನು ಆಯ್ಕೆ ಮಾಡಲು ಅವಕಾಶವಿದ್ದು ಇದರಲ್ಲಿ ಒಬ್ಬ ಆಟಗಾರನನ್ನು ಮಾತ್ರ ಇಂಪ್ಯಾಕ್ಟ್ ಆಟಗಾರನಾಗಿ ಬಳಸಬಹುದಾಗಿದೆ.
ಪ್ರತಿ ಪಂದ್ಯದಲ್ಲೂ ಉಭಯ ತಂಡಗಳಿಗೆ ಇಂಪ್ಯಾಕ್ಟ್ ಆಟಗಾರನನ್ನು ಬಳಸಬಹುದಾಗಿದ್ದು ಈ ನಿಯಮ ಕಡ್ಡಾಯವಲ್ಲ ಎಂದು ನಿಯಮಗಳಲ್ಲಿ ಹೇಳಲಾಗಿದೆ. ಸಭೆಯಲ್ಲಿ ಏಷ್ಯಾನ್ ಗೇಮ್ಸ್ಗೆ ಪುರುಷ ಮತ್ತು ಮಹಿಳಾ ತಂಡಗಳನ್ನು ಪಾಲ್ಗೊಳಲು ಒಪ್ಪಿಗೆ ನೀಡಲಾಯಿತು.