ಭಾರತ ಕ್ರಿಕೆಟ್ ಮೈದಾನಗಳ ಬಗ್ಗೆ ಪದೇ ಪದೇ ದೂರು ದೂರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಗೂ ಮುನ್ನ 5 ಪ್ರಮುಖ ಕ್ರೀಡಾಂಗಣಗಳನ್ನು ನವೀಕರಣಗೊಳಿಸಲು ಬಿಸಿಸಿಐ ನಿರ್ಧರಿಸಿದೆ.
ಬಿಸಿಸಿಐ ಮೂಲಗಳ ಪ್ರಕಾರ ಹೈದ್ರಾಬಾದ್, ನವದೆಹಲಿ,ಕೋಲ್ಕತ್ತಾ, ಮೊಹಾಲಿ ಹಾಗೂ ಮುಂಬೈ ಕ್ರೀಡಾಂಗಣಗಳು ನವೀಕರಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಇದಕ್ಕೆ ಸುಮಾರು 500 ಕೋಟಿ ರೂ.ಖರ್ಚಾಗಲಿದೆ ಎಂದು ತಿಳಿದು ಬಂದಿದೆ.
ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ,ಆಸನದ ವ್ಯವಸ್ಥೆಗಳ ಬಗ್ಗೆ ಬಿಸಿಸಿಐ ಹೆಚ್ಚಿನ ಒತ್ತು ನೀಡಲಿದೆ ಎಂದು ತಿಳಿದು ಬಂದಿದೆ.
ಡೆಲ್ಲಿ ಕ್ರೀಡಾಂಗಣಕ್ಕೆ 100 ಕೋಟಿ ರೂ. ಹೈದ್ರಾಬಾದ್ ಕ್ರೀಡಾಂಗಣಕ್ಕೆ 117.17 ಕೋಟಿ ರೂ.,ಕೋಲ್ಕತ್ತಾದ ಈಡನ್ ಮೈದಾನಕ್ಕೆ 127.47 ಕೋಟಿ ರೂ.ಮೊಹಾಲಿಗೆ 79.46 ಕೋಟಿ ರೂ. ಹಾಗೂ ಮುಂಬೈನ ವಾಂಖೆಡೆಗೆ 78.82 ಕೋಟಿ ರೂ. ಹಣದಲ್ಲಿ ನವೀಕರಣಗೊಳ್ಳಲ್ಲಿದೆ.