ಆಲ್ ಕೇರಳ ಧೋನಿ ಫ್ಯಾನ್ಸ್ ತಿರುವನಂತರಪುರಂನ ಗ್ರೀನ್ ಫೀಲ್ಡ್ ನ ಮೈದಾನದವರೆಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿಗೆ 50 ಅಡಿ ಕಟೌಟ್ ಹಾಕಿ ಗೌರವ ಸಲ್ಲಿಸಿದೆ.
ಭಾನುವಾರು ಗ್ರೀನ್ ಫೀಲ್ಡ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ 3ನೇ ಏಕದಿನ ಪಂದ್ಯ ನಡೆಯುತ್ತಿದ್ದು ಕೇರಳದಲ್ಲಿ ಕ್ರಿಕೆಟ್ ಜ್ವರ ಜೋರಾಗಿದೆ.
ಸಿಎಸ್ಕೆ ಆರ್ಮಿ ಸೋಶಿಯಲ್ ಮೀಡಿಯಾದಲ್ಲಿ ಎಂ.ಎಸ್.ಧೋನಿ ಕೇರಳದಲ್ಲಿ ತುಂಬ ಎತ್ತರದಲ್ಲಿ ನಿಂತಿದ್ದಾರೆ ಎಂದು ಬರೆದುಕೊಂಡಿದೆ.
ಇತ್ತಿಚೆಗೆ ಮುಕ್ತಾಯವಾದ ಫಿಫಾ ವಿಶ್ವಕಪ್ ವೇಳೆ ಇಲ್ಲಿನ ಫುಟ್ಬಾಲ್ ಅಭಿಮಾನಿಗಳು ಲಿಯೊನೆಲ್ ಮೆಸ್ಸಿ, ನೇಯ್ಮರ್ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಇಲ್ಲಿ ಕೋಜಿಕೋಡ್ನ ನದಿಯಲ್ಲಿ ಕೌಟೌಟ್ಗಳನ್ನು ಹಾಕಿ ಫುಟ್ಬಾಲ್ ಜಗತ್ತಿನ ಗಮನ ಸೆಳೆದಿತ್ತು. ವಿಶ್ವ ಫುಟ್ಬಾಲ್ ಸಂಸ್ಥೆ ಫಿಫಾ ಕೂಡ ತನ್ನ ಸೋಶಿಯಲ್ ಈ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿತ್ತು.
ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆದಾಗಲೆಲ್ಲ ಇಲ್ಲಿನ ಅಭಿಮಾನಿಗಳು ಬೃಹತ್ ಕಟೌಟ್ಗಳನ್ನು ಹಾಕಿ ಅಭಿಮಾನ ಮೆರೆಯುತ್ತಾರೆ.