ಮೊಹಾಲಿಯಲ್ಲಿ (Mohali) ಟೀಮ್ ಇಂಡಿಯಾದ (Team India) ಬೌಲಿಂಗ್ ಪ್ರದರ್ಶನ (Bowling Performance) ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬರ್ತಿವೆ. ಪವರ್ ಪ್ಲೇನಿಂದ ಹಿಡಿದು, ಡೆತ್ ಓವರ್ ತನಕ ಭಾರತದ ಬೌಲರ್ಗಳು ಹೊಡೆಸಿಕೊಂಡಿದ್ದೇ ದೊಡ್ಡ ಸಾಧನೆ. ಬೃಹತ್ ಮೊತ್ತದ ಟಾರ್ಗೆಟ್ ಎದುರಿಗಿದ್ದರೂ ಆಸ್ಟ್ರೇಲಿಯಾ ರೋಹಿತ್ ಬಳಗದ ಬೌಲಿಂಗ್ ವೀಕ್ನೆಸ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡು ಗೆದ್ದು ಬೀಗಿದೆ (Chasing History). ಭಾರತೀಯ ಬೌಲರ್ಗಳು ಬೌಲಿಂಗ್ ಅನ್ನೇ ಮರೆತಂತೆ ಪ್ರದರ್ಶನ ನೀಡಿದ್ದಾರೆ.
ಮೊಹಾಲಿಯಲ್ಲಿ ಭಾರತ (India Bowlers) ಯಾವ ಬೌಲರ್ ಕೂಡ ಯಾರ್ಕರ್ ಟ್ರೈ ಮಾಡಲಿಲ್ಲ. ಚೇಂಜ್ ಆಫ್ ಪೇಸ್ ಕಡೆ ಗಮನ ಕೊಡಲಿಲ್ಲ. ಶಾರ್ಟ್ ಬಾಲ್ ಎಸೆಯುವ ಧೈರ್ಯ ತೋರಲಿಲ್ಲ. ಸ್ವಿಂಗ್ ಅಂತೂ ಕಾಣಲೇ ಇಲ್ಲ. ಪರಿಣಾಮ ಆಸ್ಟ್ರೇಲಿಯಾ (Australia) ಭಾರತದ ವಿರುದ್ಧ ಗರಿಷ್ಠ ಸ್ಕೋರ್ ಚೇಸ್ ಮಾಡಿದೆ (Top Chasing). ಭಾರತದ ಮಟ್ಟಿಗೆ ಇದು ದೊಡ್ಡ ಸೋಲು. ಭಾರತದ ವಿರುದ್ಧ ದೊಡ್ಡ ಮೊತ್ತ ಚೇಸ್ ಮಾಡಿದ ತಂಡಗಳು ಹೀಗಿವೆ..
212/3- ದಕ್ಷಿಣ ಆಫ್ರಿಕಾ, ದೆಹಲಿ- 2022