ಟೀಮ್ ಇಂಡಿಯಾ (Team India) ಮಹಿಳಾ ತಂಡದ (Womens Cricket Team) ಸ್ಟೈಲಿಶ್ ಬ್ಯಾಟರ್ ಸ್ಮೃತಿ ಮಂದಾನಾ (Smriti Mandhana) ಬಹುದೊಡ್ಡ ನಿರ್ಧಾರ ಮಾಡಿದ್ದಾರೆ. ರಾಷ್ಟ್ರೀಯ ತಂಡದಲ್ಲಿ (National Team) ಹೆಚ್ಚು ಕಾಣಿಸಿಕೊಳ್ಳಬೇಕು ಎಂಬ ದೃಷ್ಟಿಯಲ್ಲಿ ಪ್ರತಿಷ್ಠಿತ ಟಿ20 ಲೀಗ್ (T20 League) ವುಮನ್ಸ್ ಬಿಗ್ ಬ್ಯಾಶ್ ಲೀಗ್ನಿಂದ (Womens Big Bash League) ಹಿಂದೆ ಸರಿದಿದ್ದಾರೆ. ಫಿಟ್ನೆಸ್ ಹಾಗೂ ಗಾಯಗೊಳ್ಳುವುದರಿಂದ (Fitness and Injury) ದೂರವಾಗುವ ಯೋಚನೆಯಲ್ಲಿ ಮಂದಾನಾ ಈ ನಿರ್ಧಾರ ಮಾಡಿದ್ದಾರೆ.
ಸ್ಟಾರ್ ಓಪನರ್ ತಮ್ಮ ಅಗ್ರೆಸ್ಸಿವ್ ಆಟದಿಂದ ಫೇಮಸ್ ಆಗಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games) ಮಿಂಚಿದ್ದ ಮಂದನಾ, ನಂತರ ಇಂಗ್ಲೆಂಡ್ನಲ್ಲಿ (Englans) ನಡೆದಿದ್ದ ದಿ ಹಂಡ್ರೆಡ್ ಲೀಗ್ನಲ್ಲಿ (The Hundred League) ಕಾಣಿಸಿಕೊಂಡಿದ್ದರು. ಈಗ ಮತ್ತೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ (T20 Series) ಭಾರತದ (India) ಪರ ಆಡುತ್ತಿದ್ದಾರೆ. ಸತತ ಆಟದಿಂದ ಬಳಲಿಕೆ ಹಾಗೂ ಗಾಯದ ಭೀತಿ ಇರುವುದರಿಂದ ಬಿಗ್ ಬ್ಯಾಷ್ ಲೀಗ್ (WBBL) ಆಫರ್ ತಿರಸ್ಕರಿಸಿದ್ದಾರೆ. ಭಾರತಕ್ಕಾ
ಮಂದಾನಾ ಟೀಮ್ ಇಂಡಿಯಾ ಮಹಿಳಾ ತಂಡದ ಉಪನಾಯಕಿ (Vice Captain) ಕೂಡ ಆಗಿದ್ದಾರೆ. ಸ್ಮೃತಿ ಕಳೆದ ಫೆಬ್ರವರಿಯಿಂದ ಸತತವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ನ್ಯೂಜಿಲೆಂಡ್ (Newzealand) ಸರಣಿ, ಬಳಿಕ ಏಕದಿನ ವಿಶ್ವಕಪ್ (ODI Worldcup), ದೇಶಿಯ ಏಕದಿನ ಮತ್ತು ಟಿ20 ಸರಣಿ (T20 Series), ಶ್ರೀಲಂಕಾ ಸರಣಿ, ಕಾಮನ್ವೆಲ್ತ್ ಗೇಮ್ಸ್ ಹೀಗೆ ಭಾರತ ಆಡಿದ ಎಲ್ಲಾ ಸರಣಿಗಳನ್ನು ತಂಡದ ಇನ್ನಿಂಗ್ಸ್ ಆರಂಭಿಸಿದ್ದರು. ಈಗ ಇಂಗ್ಲೆಂಡ್ ವಿರುದ್ಧವೂ ಆಟ ಆಡುತ್ತಿದ್ದಾರೆ. ವಿರಾಮವಿಲ್ಲದೆ ಆಟ ಆಡುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಸ್ಮೃತಿ ಈ ನಿರ್ಧಾರ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಟೀಮ್ ಇಂಡಿಯಾದ ಮಹಿಳಾ ತಂಡಕ್ಕೆ ಸತತ ಕ್ರಿಕೆಟ್ ಪಂದ್ಯವಿದೆ. ಅಷ್ಟೇ ಅಲ್ಲ ಬಿಸಿಸಿಐ (IPL) ಮಹಿಳಾ ಐಪಿಎಲ್ (Womens IPL) ಆಯೋಜಿಸಲು ಕೂಡ ಪ್ಲಾನ್ ಮಾಡಿದೆ. ಹೀಗಾಗಿ ಎಲ್ಲಾ ಟೂರ್ನಿಗಳಿಗೂ ಸ್ಮೃತಿ ಸಿದ್ಧವಾಗಬೇಲಿದೆ. ಬಿಬಿಎಲ್ನಿಂದ ಹೊರ ಬಿದ್ದ ಮೊದಲ ಹೈ ಪ್ರೊಫೈಲ್ ಕ್ರಿಕೆಟರ್ ಕೂಡ ಸ್ಮೃತಿ ಮಂದಾನಾ ಆಗಿದ್ದಾರೆ.