ಮೌಂಟ್ ಮಗ್ನುಯಿನಲ್ಲಿ ಬಾಂಗ್ಲಾದೇಶ ಅಂದುಕೊಂಡಿದ್ದನ್ನು ಸಾಧಿಸಿ ಬಿಟ್ಟಿದೆ. ನ್ಯೂಜಿಲೆಂಡ್ ತಂಡವನ್ನು ಅದರದ್ದೇ ನೆಲದಲ್ಲಿ ಟೆಸ್ಟ್ ಪಂದ್ಯದಲ್ಲಿ ಸೋಲಿಸಿದೆ. ಪಂದ್ಯದ 5ನೇ ದಿನ ನ್ಯೂಜಿಲೆಂಡ್ ತಂಡವನ್ನು ಬಾಂಗ್ಲಾದೇಶ ಬೇಗನೆ ಕಟ್ಟಿಹಾಕಿತು. 40ರನ್ ಗಳಿಸಿದ್ದ ರಾಸ್ ಟೇಲರ್ ಮೊದಲು ಪವೆಲಿಯನ್ ಸೇರಿಕೊಂಡರು. ಅವರ ಹಿಂದೆಯೇ ಕೈಲ್ ಜೇಮಿಸನ್ ಖಾತೆ ತೆರೆಯದೆ ಔಟ್ ಆದರು. 16 ರನ್ಗಳಿಸಿದ್ದ ರಚಿನ್ ರವೀಂದ್ರ ಕೂಡ ಔಟಾದರು. ನ್ಯೂಜಿಲೆಂಡ್ 2ನೇ ಇನ್ನಿಂಗ್ಸ್ನಲ್ಲಿ 169 ರನ್ಗಳಿಗೆ ಆಲೌಟ್ ಆಯಿತು. ಎಬಡೊತ್ ಹುಸೈನ್ 6 ವಿಕೆಟ್ ಪಡೆದು ಮಿಂಚಿದರು.
42 ರನ್ಗಳ ವಿಜಯದ ಗುರಿ ಪಡೆದ ಬಾಂಗ್ಲಾದೇಶ ಶಡ್ಮನ್ ಇಸ್ಲಾಂ ಮತ್ತು ನಜ್ಮಲ್ ಹೊಸೈನ್ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಆದರೆ ನಾಯಕ ಮೊಮಿನುಲ್ ಹಕ್ ಮತ್ತು ಮುಷ್ಫಿಕರ್ ರಹೀಂ ತಂಡವನ್ನು ಗೆಲುವಿನ ದಡ ದಾಟಿಸಿದರು.