ಜಿಂಬಾಬ್ವೆ ವಿರುದ್ಧ ಮಳೆ ಪೀಡಿತ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ವೆಸ್ಟ್ಇಂಡೀಸ್ ಭರ್ಜರಿ ಆರಂಭ ಪಡೆದಿದೆ.
ಬುಲವಾಯೊದಲ್ಲಿ ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದ ಎರಡನೆ ದಿನದಾಟದ ಅಂತ್ಯಕ್ಕೆ 89 ಓವರ್ಗಳಲ್ಲಿ 221 ರನ್ ಗಳಿಸಿದೆ.
ಕ್ರೇಗ್ ಬ್ರಾಥ್ವೈಟ್ ಅಜೇಯ 175 ರನ್ ತಗೆನರೈನ್ ಚಂದ್ರಪೌಲ್ ಅಜೇಯ 135 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮಳೆಯಿಂದಾಗಿ 51 ಓವರ್ಗಳ ಆಟ ನಡೆಯಿತು.
2ನೇ ದಿನವೂ ಮಳೆಯಿಂದಾಗಿ ದಿನದಾಟ ಬೇಗನೆ ಕೊನೆಗೊಂಡಿತು. ಮಳೆ ಭೀತಿ ಇರುವುದರಿಂದ ಪಂದ್ಯ ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಿದೆ.