ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ ಜೂ.7ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ವಿಶ್ವಟೆಸ್ಟ್ ಫೈನಲ್ಗೆ ಭಾರತ ಸತತ ಎರಡನೆ ಬಾರಿ ಪ್ರವೇಶಿಸಿದೆ. ಚೊಚ್ಚಲ ವಿಶ್ವ ಟೆಸ್ಟ್ ಫೈನಲ್ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಸೋಮವಾರ ಕ್ರೈಸ್ಟ್ ಚರ್ಚ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ರೋಚಕವಾಗಿ ಗೆದ್ದುಕೊಂಡಿತು.
ಶ್ರೀಲಂಕಾ ತಂಡ ವಿಶ್ವ ಟೆಸ್ಟ್ ಫೈನಲ್ಗೆ ಹೋಗಲು ನ್ಯೂಜಿಲೆಂಡ್ ವಿರುದ್ಧ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಬೇಕಿತ್ತು. ಆದರೆ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಗೆದ್ದು ಭಾರತಕ್ಕೆ ನೆರವಾಯಿತು.
ಇಂದೋರ್ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ ಫೈನಲ್ಗೆ ಮೊದಲ ತಂಡವಾಗಿ
ಅರ್ಹತೆ ಪಡೆಯಿತು. ವಿಶ್ವ ಟೆಸ್ಟ್ ಫೈನಲ್ ಪ್ರವೇಶಿಸಲು ಭಾರತ ಅಹಮದಾಬಾದ್ ಟೆಸ್ಟ್ ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಎದುರಿಸಬೇಕಾಯಿತು.
ಒಂದು ವೇಳೆ ಶ್ರೀಲಂಕಾ ಮೊದಲ ಟೆಸ್ಟ್ ಗೆದ್ದು ಎರಡನೆ ಟೆಸ್ಟ್ ಪಂದ್ಯವನ್ನು ಗೆದ್ದಿದ್ದರೆ 53.11ರಿಂದ 61.11 ಅಂಕ ಪಡೆಯುತ್ತಿತ್ತು.ಭಾರತಕ್ಕಿಂತ (60.29) ಹೆಚ್ಚು ಅಂಕ ಪಡೆಯುತ್ತಿತ್ತು. ಆದರೆ ಇದಕ್ಕೆ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅವಕಾಶ ಕೊಡದೇ ಅಜೇಯ 121 ರನ್ ಹೊಡೆದು ಲಂಕಾವನ್ನು ಧ್ವಂಸ ಮಾಡಿದರು.