ವಿಶ್ವ ಟೆಸ್ಟ್ ಫೈನಲ್ಗೆ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದ್ದು ರನ್ ಯಂತ್ರ ವಿರಾಟ್ ಕೊಹ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಇಂದಿನಿಂದ ಅಭ್ಯಾಸ ಆರಂಭಿಸಲಿದ್ದಾರೆ.
ಸೋಮವಾರ ಇಲ್ಲಿನ ಕಾಸಟ್ಲೆ ಕ್ರಿಕೆಟ್ ಕ್ಲಬ್ನಲ್ಲಿ ಟೀಮ್ ಇಂಡಿಯಾ ಅಭ್ಯಾಸ ಆರಂಭಿಸಿದೆ. ವೇಗಿ ಜಯ್ದೇವ್ ಉನಾದ್ಕತ್ ಕೂಡ ಅಭ್ಯಾಯಸದಲ್ಲಿ ಭಾಗಿಯಾಗಿದ್ದರು.
ಜೂ.7ರಿಂದ 11ರವರೆಗೆ ಒವೆಲ್ ಮೈದಾನದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ.ಭಾರತ ತಂಡ ಅಭ್ಯಾಸ ಆರಂಭಿಸಿದೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಹೊಸ ಕಿಟ್ ಧರಿಸಿ ವಿರಾಟ್ ಕೊಹ್ಲಿ, ಉಮೇಶ್ ಯಾದವ್, ಮೊಹ್ಮದ್ ಸಿರಾಜ್ ಮತ್ತು ಆರ್ಅಶ್ವಿನ್ ಅಭ್ಯಾಸ ಮಾಡಿದರು. ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್ನಲ್ಲಿ ಸಾಸೆಕ್ಸ್ ತಂಡದ ಪರ ಆಡ್ತುತಾ ಬಂದಿದ್ದು ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಉಮೇಶ್ ಯಾದವ್ ಮತ್ತು ಶಾರ್ದೂಲ್ ಠಾಕೂರ್ ಮೊದಲ ತಂಡದಲ್ಲಿ ಆಗಮಿಸಿದ್ದಾರೆ. ಕೊನೆಯ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್ ಆಂಗ್ಲರ ನಾಡಿಗೆ ಬಂದಿಳಿದಿದ್ದಾರೆ.
ರವೀಂದ್ರ ಜಡೇಜಾ,ಶುಭಮನ್ ಗಿಲ್, ಮೊಹ್ಮದ್ ಶಮಿ, ಕೆ.ಎಸ್.ಭರತ್ ಮತ್ತು ಅಜಿಂಕ್ಯ ರಹಾನೆ ಮಂಗಳವಾರ ಅಹಮದಾಬಾದ್ನಿಂದ ಹೊರಡಲಿದ್ದಾರೆ.
ಋತುರಾಜ್ ಗಾಯಕ್ವಾಡ್ ವಿವಾಹವಾಗುತ್ತಿರುವ ಹಿನ್ನೆಲೆಯಲ್ಲಿ ಬದಲಿ ಆಟಗಾರನಗಿ ಯಶಸ್ವಿ ಜೈಸ್ವಾಲ್ ನೇಮಕವಾಗಿದ್ದಾರೆ.
ಐಸಿಸಿ ಪ್ರಾಯೋಜತ್ವದ ಪಂದ್ಯವಾಗಿರುವುದರಿಂದ ಭಾರತ ತಂಡ ಅಭ್ಯಾಸ ಪಂದ್ಯಗಳನ್ನು ಆಡುತ್ತಿಲ್ಲ.
ವಿಶ್ವ ಟೆಸ್ಟ್ಗೆ ಅಂಪೈಯರ್ ನೇಮಕ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಫೈನಲ್ ಪಂದ್ಯಕ್ಕೆ ಐಸಿಸಿ ಅಂಪೈಯರ್ಗಳನ್ನು ನೇಮಕ ಮಾಡಿದೆ. ಕ್ರಿಸ್ ಗಾನೆ ಮತ್ತು ರಿಚರ್ಡ್ ಇಲ್ಲಿಂಗ್ವರ್ತ್ ಆನ್ಫೀಲ್ಡ್ ಅಂಪೈಯರ್ಗಳಾಗಿ ನೇಮಕಗೊಂಡಿದ್ದಾರೆ. ಶ್ರೀಲಂಕಾದ ಕುಮಾರ `ಧರ್ಮಸೇನಾ ನಾಲ್ಕನೆ ಅಂಪೈಯರ್ರಾಗಿ ಕಾರ್ಯನಿರ್ವಹಿಸಲಿದ್ದಾರೆ.