ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ವಿಜೇತ ತಂಡಕ್ಕೆ 1.6 ದಶಲಕ್ಷ ಡಾಲರ್ (13.2 ಕೋಟಿರೂ.)ಸಿಗಲಿದೆ. ರನ್ನರ್ಅಪ್ ತಂಡಕ್ಕೆ 800,000 ಯುಎಸ್ ಡಾಲರ್ ಹಣ ಸಿಗಲಿದೆ.
ಚಾಂಪಿಯನ್ಶಿಪ್ನ ನಿರ್ಣಾಯಕ ಪಂದ್ಯ ಜೂ.7ರಿಂದ 11ರವರೆಗೆ ನಡೆಯಲಿದೆ. ಜೂ.12ಕ್ಕೆ ಮೀಸಲು ದಿನ ನಿಗದಿ ಮಾಡಲಾಗಿದೆ.
2019-21ರಲ್ಲಿ ವಿಜೇತ ತಂಡಕ್ಕೆ ನಿಗದಿ ಮಾಡಿದ್ದ ಬಹುಮಾನ ಮೊತ್ತವನ್ನೆ ನಿಗದಿ ಮಾಡಲಾಗಿದೆ.
ಎರಡು ವರ್ಷಗಳ ಹಿಂದೆ ನಡೆದ ಚೊಚ್ಚಲ ವಿಶ್ವ ಟೆಸ್ಟ್ ಫೈನಲ್ನಲ್ಲಿ ವಿಜೇತ ತಂಡ ನ್ಯೂಜಿಲೆಂಡ್ಗೆ 1.6 ಯುಎಸ್ ಡಾಲರ್ ಬಹುಮಾನ ಪಡೆದಿತ್ತು.
9 ತಂಡಗಳಿಗೆ 3.8 ಮಿಲಿಯನ್ ಹಣ ಹಂಚಿಕೆಯಾಗಿವೆ. 2021ರಿಂದ 23ರವರೆಗೆ ದಕ್ಷಿಣ ಆಫ್ರಿಕಾ ತಂಡ 450,000 ಯುಎಸ್ ಡಾಲರ್ ಹಣ ಪಡೆದಿದೆ.
ಇಂಗ್ಲೆಂಡ್ ತಂಡ ನಾಲ್ಕನೆ ಸ್ಥಾನ ಪಡೆದಿದ್ದು 350,000 ಯುಎಸ್ ಡಾಲರ್ ಹಣ ಪಡೆದಿದೆ. ಶ್ರೀಲಂಕಾ ಐದನೆ ಸ್ಥಾನ ಪಡೆದಿದ್ದು 200000 ಯುಎಸ್ ಡಾಲರ್ ಹಣ ಪಡೆದಿದೆ.
ನ್ಯೂಜಿಲೆಂಡ್ (6ನೇ ಸ್ಥಾನ), ಪಾಕಿಸ್ತಾನ (7ನೇ ಸ್ಥಾನ), ವೆಸ್ಟ್ಇಂಡೀಸ್(8ನೇ ಸ್ಥಾನ), ಬಾಂಗ್ಲಾದೇಶ (9ನೇ ಸ್ಥಾನ) ತಂಡಗಳಿಗೆ ತಲಾ 1,00,000 ಯುಎಸ್ ಡಾಲರ್ ಮೊತ್ತ ಸಿಗಲಿದೆ.