ವಿಶ್ವ ಟೆಸ್ಟ್ ಫೈನಲ್ ಪಂದ್ಯ ಆಡಲು ರನ್ ಯಂತ್ರ ವಿರಾಟ್ ಕೊಹ್ಲಿ ಲಂಡನ್ ತಲುಪಿದ್ದಾರೆ. ಜೂ.7ರಂದು ಲಂಡನ್ನ ಒವೆಲ್ ಮೈದಾನದಲ್ಲಿ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಮಾಜಿ ನಾಯಕ ವಿರಾಟ್ ಕೊಹ್ಲಿ ಸಹ ಆಟಗಾರರ ಜತೆ ಆಂಗ್ಲರ ನಾಡಿಗೆ ಬಂದಿದ್ದಾರೆ. ಪ್ರಸಕ್ತ ಐಪಿಎಲ್ನಲ್ಲಿ ಆರ್ಸಿಬಿ ತಂಡ ಪ್ಲೇಆಫ್ಗೇರುವಲ್ಲಿ ವಿಫಲವಾಯಿತು.
ಶುಕ್ರವಾರ ಸೆಲಿ ತೆಗೆಸಿಕೊಂಡಿರುವ ಕೊಹ್ಲಿ ಬ್ಲೂ ಜಾಕೆಟ್ನಲ್ಲಿ ಕಂಗೊಳಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಆಂಗ್ಲರ ನಾಡಲ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಪ್ರವಾಸ ಮಾಡುತ್ತಿದ್ದಾರೆ.
ಒಳ್ಳೆಯ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ , ಮೊನ್ನೆ ಐಪಿಎಲ್ನಲ್ಲಿ ಒಂದರ ಹಿಂದೆ ಒಂದು ಶತಕ ಸಿಡಿಸಿದ್ದರು. 14 ಪಂದ್ಯಗಳಿಂದ 2 ಶತಕ, 4 ಅರ್ಧ ಶತಕ ಸಿಡಿಸಿ ಕೊಹ್ಲಿ 639 ರನ್ ಹೊಡೆದಿದ್ದರು.
ಇದೀಗ 10 ವರ್ಷಗಳಿಂದ ಐಸಿಸಿ ಪ್ರಶಸ್ತಿ ಬರ ಎದುರಿಸುತ್ತಿರುವ ಭಾರತ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಲಕೊಡಲು ಹೋರಾಡಲಿದ್ದಾರೆ. 2013ರಲ್ಲಿ ಕೊನೆಯ ಬಾರಿಗೆ `ಧೋನಿ ನೇತೃತ್ವದ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು.
ವಿಶ್ವ ಟೆಸ್ಟ್ ಫೈನಲ್ ಗೆಲ್ಲುವ ಕುರಿತು ವಿರಾಟ್ ಕೊಹ್ಲಿ, ಸೊಗಸಾದ ಹೊಡೆತಗಳನ್ನು ಹೊಡೆಯೊದಲ್ಲ ಐಪಿಎಲ್ ನಂತರ ಟೆಸ್ಟ್ ಕ್ರಿಕೆಟ್ ಇದೆ. ನನ್ನ ತಂತ್ರಗಾರಿಕೆಯನ್ನು ನಾನು ನಂಬ ಬೇಕೆಂದಿದ್ದಾರೆ.
ಇದುವರೆಗೂ ಆಂಗ್ಲರ ನಾಡಲ್ಲಿ ವಿರಾಟ್ ಕೊಹ್ಲಿ 16 ಟೆಸ್ಟ್ ಪಂದ್ಯಗಳಿಂದ 1,033 ರನ್ ಹೊಡೆದಿದ್ದು ಇದರಲ್ಲಿ 2 ಶತಕ 5 ಅರ್ಧ ಶತಕ ಒಳಗೊಂಡಿವೆ. ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ರನ್ ಹೊಡೆದಿದ್ದಾರೆ. 2 ಪಂದ್ಯಗಳಿಂದ 1,979 ರನ್ ಕಲೆ ಹಾಕಿದ್ದಾರೆ. 8 ಶತಕ 5 ಅರ್ಧ ಶತಕ ಒಳಗೊಂಡಿದೆ.