ಲಂಡನ್‌ನ ಓವಲ್ ಅಂಗಳದಲ್ಲಿ ಅದ್ಭುತ ಬ್ಯಾಟಿಂಗ್ ದಾಖಲೆ ಹೊಂದಿರುವ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಟೀಂ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಮತ್ತೊಮ್ಮೆ ತನ್ನ ಪ್ರಾಬಲ್ಯ ಮುಂದುವರಿಸಿದ್ದಾರೆ.
ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸ್ಟೀವ್ ಸ್ಮಿತ್(95*) ರನ್‌ಗಳಿಸಿ ಶತಕದತ್ತ ಮುಖ ಮಾಡಿದ್ದಾರೆ. ಅಲ್ಲದೇ 4ನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಜೊತೆಗೂಡಿ 251* ರನ್‌ಗಳ ಅಜೇಯ ಜೊತೆಯಾಟವಾಡಿ ತಂಡದ ಮೊತ್ತವನ್ನ ಮೊದಲ ದಿನದಂತ್ಯಕ್ಕೆ 327/3ಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಓವಲ್ ಮೈದಾನದಲ್ಲಿ ತಮ್ಮದೇ ಬ್ಯಾಟಿಂಗ್ ಪರಾಕ್ರಮ ಹೊಂದಿರುವ ಆಸೀಸ್ ಮಾಜಿ ನಾಯಕ, ಟೀಂ ಇಂಡಿಯಾ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲೂ ಅಮೋಘ ಆಟವಾಡಿ ತಂಡಕ್ಕೆ ಆಸರೆಯಾಗಿದ್ದಾರೆ.
ದಿ ಓವಲ್ ಮೈದಾನದಲ್ಲಿ ಸ್ಟೀವ್ ಸ್ಮಿತ್ 4 ಟೆಸ್ಟ್ ಪಂದ್ಯಗಳನ್ನಾಡಿದ್ದು, 121.50ರ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಒಟ್ಟು 486 ರನ್‌ಗಳಿಸಿರುವ ಸ್ಮಿತ್, ಎರಡು ಶತಕಗಳನ್ನ ದಾಖಲಿಸಿದ್ದು, ಮತ್ತೊಂದು ಶತಕದತ್ತ ಮುಖ ಮಾಡಿದ್ದಾರೆ. ಟೀಂ ಇಂಡಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್‌ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಸ್ಟೀವ್ ಸ್ಮಿತ್, ಮುಂಬರುವ ಇಂಗ್ಲೆಂಡ್ ವಿರುದ್ಧದ ಆಶಸ್ ಸರಣಿಗೆ ಗ್ರ್ಯಾಂಡ್ ಎಂಟ್ರಿಕೊಡಲು ಸಜ್ಜಾಗಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಷಿಪ್‌ನ ಮೊದಲ ದಿನದಾಟದಲ್ಲಿ ಅನುಭವಿ ಸ್ಟೀವ್ ಸ್ಮಿತ್(95*) ಹಾಗೂ ಟ್ರಾವಿಸ್ ಹೆಡ್(146*) ಅವರುಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದಂತ್ಯಕ್ಕೆ 327/3 ರನ್‌ಗಳಿಸಿದ್ದು, ಆ ಮೂಲಕ ಬೃಹತ್ ಮೊತ್ತ ಕಲೆಹಾಕುವತ್ತ ಮುಖ ಮಾಡಿದೆ.
WTC Final, Steve Smith, Australia, Team India, Sports Karnataka