ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಪ್ರಮುಖ ಆಟಗಾರರಾಗಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ಇವರಿಬ್ಬರನ್ನೂ ಬೇಗನೆ ಔಟ್ ಮಾಡಲು ಯೋಜನೆ ರೂಪಿಸಬೇಕಿದೆ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ ವಿರಾಟ್ ಕೊಹ್ಲಿ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ ಚೇತೇಶ್ವರ ಪೂಜಾರ ಬಗ್ಗೆಯೂ ಮಾತನಾಡುತ್ತಿದೆ ಎಂದಿದ್ದಾರೆ.
ಚೇತೇಶ್ವರ ಪೂಜಾರ ಆಸ್ಟ್ರೇಲಿಯಾ ವಿರುದ್ಧ ರನ್ ಮಳೆ ಸುರಿಸಿದ್ದಾರೆ ಮತ್ತು ಬೇರೆ ಯಾವ ತಂಡಗಳ ವಿರುದ್ಧ ಹೊಡೆಯದ ಶತಕಗಳನ್ನು ಶತಕಗಳನ್ನು ಆಸ್ಟ್ರೇಲಿಯಾ ವಿರ್ಧು ಹೊಡೆದಿದ್ದಾರೆ. ಆಸಿಸ್ ವಿರುದ್ಧ ಪೂಜಾರ 24 ಟೆಸ್ಟ್ ಆಡಿದ್ದು 2033 ರನ್ ಮತ್ತು 5 ಶತಕ ಸಿಡಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿದ್ದಾರೆ. 24 ಟೆಸ್ಟ್ ಪಂದ್ಯಗಳಿಂದ 1979 ರನ್ ಪೇರಿಸಿದ್ದಾರೆ. 186 ಅತಿ ಹೆಚ್ಚು ರನ್ ಆಗಿದೆ.