ಟೀಂ ಇಂಡಿಯಾ ಮಹಿಳಾ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಟಿ20 ಕ್ರಿಕೆಟ್ನಲ್ಲಿ ಭಾರತ ಪುರುಷರ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ದಾಖಲೆ ಮುರಿದಿದ್ದು, ಆ ಮೂಲಕ T20I ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಹರ್ಮನ್ಪ್ರೀತ್ ಕೌರ್, ತಮ್ಮ ಕ್ರಿಕೆಟ್ ವೃತ್ತಿ ಬದುಕಿನ 149ನೇ ಟಿ20 ಪಂದ್ಯವಾಡಿದರು. ಆ ಮೂಲಕ ಟೀಂ ಇಂಡಿಯಾ ನಾಯಕಿ T20Iನಲ್ಲಿ ಅತ್ಯಧಿಕ ಪಂದ್ಯವಾಡಿದ ಹೆಗ್ಗಳಿಕೆ ಪಡೆದುಕೊಂಡರು.
ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ರೋಹಿತ್ ಶರ್ಮ ಅವರ ಹೆಸರಿನಲ್ಲಿದ್ದ ದಾಖಲೆಯನ್ನ ಹರ್ಮನ್ಪ್ರೀತ್ ಕೌರ್ ಹಿಂದಿಕ್ಕಿದರು. ಟೀಂ ಇಂಡಿಯಾದ ಪುರುಷ ತಂಡದ ನಾಯಕ ರೋಹಿತ್ ಶರ್ಮ ಈವರೆಗೂ 148 T20I ಪಂದ್ಯವಾಡಿದ್ದಾರೆ. ಹರ್ಮನ್ಪ್ರೀತ್ ಕೌರ್ ಹಾಗೂ ರೋಹಿತ್ ಶರ್ಮ ಟೀಂ ಇಂಡಿಯಾದ ನಾಯಕರಾಗಿ ದೊಡ್ಡಮಟ್ಟದ ಯಶಸ್ಸು ಕಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್(4) ಅಲ್ಪಮೊತ್ತಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.
WT20I Cricket, Team India, Rohit Sharma, Harmanpreet Kaur, Sports Karnataka