Wriddhiman Saha – ಪಶ್ಚಿಮ ಬಂಗಾಳ ತಂಡದಿಂದ ಹೊರಬಂದ ವೃದ್ದಿಮಾನ್ ಸಹಾ-
ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ವೃದ್ದಿಮಾನ್ ಸಹಾ ಅವರು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಜೊತೆಗಿನ ಸಂಬಂಧವನ್ನು ಮುರಿದುಕೊಂಡಿದ್ದಾರೆ.
ನಾನು ಪಶ್ಚಿಮ ಬಂಗಾಳ ತಂಡದ ಪರ ಆಡುತ್ತಿಲ್ಲ. ಬೇರೆ ರಾಜ್ಯದ ಪರ ಆಡಲು ನನಗೆ ಎನ್ ಒಸಿ ನೀಡುವಂತೆ ವೃದ್ದಿಮಾನ್ ಸಹಾ ಅವರು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಗೆ ಮನವಿ ಮಾಡಿಕೊಂಡಿದ್ದರು.
ಈ ನಡುವೆ, ವೃದ್ದಿಮಾನ್ ಸಹಾ ಅವರನ್ನು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ಮನವೊಲಿಸುವ ಪ್ರಯತ್ನವನ್ನು ಮಾಡಿತ್ತು. ಆದ್ರೆ ವೃದ್ದಿಮಾನ್ ಸಹಾ ಅವರು ಸಹಮತ ಸೂಚಿಸಿರಲಿಲ್ಲ. ಹೀಗಾಗಿ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ಇದೀಗ ಸಹಾ ಅವರಿಗೆ ಎನ್ ಒಸಿ ನೀಡಿದೆ.
ಮಿಸ್ಟರ್ ವೃದ್ದಿಮಾನ್ ಸಹಾ ಅವರು ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ ನೀಡುವಂತೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಅವರಿಗೆ ಮನವಿ ಮಾಡಿಕೊಂಡಿದ್ದರು. ವೃದ್ದಿಮಾನ್ ಸಹಾ ಅವರ ಕೋರಿಕೆಯಂತೆ ಅವರಿಗೆ ಬೇರೆ ರಾಜ್ಯದ ಪರ ಆಡಲು ಎನ್ ಒಸಿ ನೀಡಲಾಗಿದೆ. ವೃದ್ದಿಮಾನ್ ಸಹಾ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗಲಿ ಎಂದು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

37ರ ಹರೆಯದ ವೃದ್ದಿಮಾನ್ ಸಹಾ ಅವರು ಕಳೆದ 15 ವರ್ಷಗಳಿಂದ ಪಶ್ಚಿಮ ಬಂಗಾಳ ಕ್ರಿಕೆಟ್ ತಂಡದ ಪರ ಆಡಿದ್ದರು. ಅಲ್ಲದೆ 122 ಪಂದ್ಯಗಳನ್ನು ಆಡಿದ್ದರು. ಮುಂದಿನ ದಿನಗಳಲ್ಲಿ ವೃದ್ದಿಮಾನ್ ಸಹಾ ಅವರು ತ್ರಿಪುರಾ ಅಥವಾ ಗುಜರಾತ್ ತಂಡದ ಪರ ಆಡುವ ಸಾಧ್ಯತೆಗಳಿವೆ. Wriddhiman Saha had severe ties with Bengal after falling out with a CAB officia
ಈ ವರ್ಷದ ರಣಜಿ ಟೂರ್ನಿಯಲ್ಲಿ ವೃದ್ದಿಮಾನ್ ಸಹಾ ಅವರು ಆಡಿರಲಿಲ್ಲ. ಆದ್ರೆ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದರು. ಅಲ್ಲದೆ ಪಶ್ಚಿಮ ಬಂಗಾಳ ರಣಜಿ ತಂಡದಲ್ಲಿ ಆಡುವುದಿಲ್ಲ ಎಂದು ಕೂಡ ಹೇಳಿದ್ದರು.

ಇದಕ್ಕೆ ಕಾರಣವೂ ಇದೆ. ಕಳೆದ ನ್ಯೂಜಿಲೆಂಡ್ ವಿರುದ್ದದ ಟೆಸ್ಟ್ ಪಂದ್ಯದಲ್ಲಿ ಸಹಾ ಅವರು ಟೀಮ್ ಇಂಡಿಯಾ ಪರ ಆಡಿದ್ದರು. ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ವೃದ್ದಿಮಾನ್ ಸಹಾ ಅವರು ಆಕರ್ಷಕ 61 ರನ್ ಗಳಿಸಿದ್ದರು. ಇದೇ ವೇಳೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವೃದ್ದಿಮಾನ್ ಸಹಾ ಅವರನ್ನು ಅಭಿನಂದಿಸಿ ವಾಟ್ಸಪ್ ನಲ್ಲಿ ಮೆಸೇಜ್ ಕೂಡ ಮಾಡಿದ್ದರು.ನಾನು ಬಿಸಿಸಿಐ ಅಧ್ಯಕ್ಷ ನಾಗಿರುವ ತನಕ ನಿನಗೆ ಟೀಮ್ ಇಂಡಿಯಾದಲ್ಲಿ ಸ್ಥಾನವಿರುತ್ತದೆ ಎಂದು ಗಂಗೂಲಿ ಸಂದೇಶ ಕಳುಹಿಸಿದ್ದರು ಎಂದು ಸ್ವತಃ ವೃದ್ದಿಮಾನ್ ಸಹಾ ಹೇಳಿಕೊಂಡಿದ್ದರು. ಏತನ್ಮಧ್ಯೆ ವೃದ್ದಿಮಾನ್ ಸಹಾ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಾಗಿತ್ತು. ಆಗ ತಾನು ಪಶ್ಚಿಮ ಬಂಗಾಳ ರಣಜಿ ತಂಡದಲ್ಲಿ ಆಡುವುದಿಲ್ಲ ಎಂದು ವೃದ್ದಿಮಾನ್ ಸಹಾ ಹೇಳಿದ್ದರು.