ಭಾರತ ರೆಸ್ಲಿಂಗ್ ಫೆಡರೇಶನ್ ಅಧ್ಯಕ್ಷರ ವಿರುದ್ಧದ ಲೈಂಗಿಕ ಆರೋಪಗಳ ವಿಚಾರಣೆಗೆ ಸಂಬಂಸಿದಂತೆ ತನಿಖಾ ವರದಿಯನ್ನು ಶೀಘ್ರದಲ್ಲೆ ಸಲ್ಲಿಸುವುದಾಗಿ ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ.ಉಷಾ ತಿಳಿಸಿದ್ದಾರೆ.
ಲೈಂಗಿಕ ಆರೋಪಗಳ ವಿಚಾರಣೆ ಕುರಿತು, ವರದಿ ಇನ್ನು ಅಂತಿಮವಾಗಿಲ್ಲ. ಪ್ರಕ್ರಿಯೆ ಮುಂದುವರೆದಿದೆ. ನಾವು ಕುಸ್ತಿಪಟುಗಳನ್ನು ಭೇಟಿಯಾಗಿದ್ದೇವೆ. ಭಾರತ ಒಲಿಂಪಿಕ್ ಅಸೋಸಿಯೇಷನ್ ಅಂತಿಮಗೊಳಿಸಿ ವರದಿಯನ್ನು ಸಲ್ಲಿಸಲಿದೆ ಎಂದು ಪಿ.ಟಿ.ಉಷಾ ಮಾಹಿತಿ ನೀಡಿದರು.
ಇದು ತುಂಬ ಸೂಕ್ಷ್ಮ ವಿಷಯವಾಗಿದೆ.ಒಳ್ಳೆಯ ರೀತಿಯಲ್ಲಿ ವರದಿ ಸಿದ್ಧಪಡಿಸಬೇಕಿದೆ.ಶೀಘ್ರದಲ್ಲೆ ವರದಿ ಸಲ್ಲಿಕೆಯಾಗುತ್ತದೆ ಎಂದು ಮಾಹಿತಿ ನೀಡಿದರು.
ನಾನು ಅಧಿಕಾರ ಸ್ವೀಕರಿಸಿದ ಮೇಲೆ ಪ್ರಕರಣ ದಾಖಲಾಯಿತು. ಸಚಿವಾಲಯ ಮತ್ತು ಒಲಿಂಪಿಕ್ ಅಸೋಸಿಯೇಷನ ಸಮಿತಿಗಳನ್ನು ರಚಿಸಿದೆವು ಎಂದರು.
ಜ.20ರಂದು ತನಿಖೆಗೆ ಮೇರಿ ಕೋಮ್ ನೇತೃತ್ವದಲ್ಲಿ 7 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು. ವರದಿ ಆಧಾರದ ಮೇಲೆ ಕೇಂದ್ರ ಕ್ರೀಡಾ ಸಚಿವಾಲಯ ಕ್ರಮಕೈಗೊಳ್ಳಲಿದೆ.