ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಸತತ ಐದನೆ ಸೋಲು ಕಂಡಿದ್ದು ಬಹುತೇಕ ಟೂರ್ನಿಯಿಂದ ಹೊರ ಬಿದ್ದಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದದ ಪಂದ್ಯದಲ್ಲಿ ಆರ್ಸಿಬಿ 6 ವಿಕೆಟ್ಗಳ ಸೋಲು ಕಂಡಿದೆ.
ನಾಲ್ಕನೆ ಜಯದೊಂದಿಗೆ ಡೆಲ್ಲಿ ತಂಡ ಅಂಕಪಟ್ಟಿಯಲ್ಲಿ ಎರಡನೆ ಸ್ಥಾನ ಕಾಯ್ದುಕೊಂಡಿತು. ಪ್ಲೇ ಆಫ್ಘೇರುವುದು ಅನುಮಾನದಿಂದ ಕೂಡಿದೆ.
ಮೊದಲ ಬ್ಯಾಟ್ ಮಾಡಿದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕಿತು. ಆರ್ಸಿಬಿ ಪರ ಎಲೈಸಿ ಪೆರ್ರಿ 67 ಹಾಗೂ ರಿಚಾ ಘೋಷ್ 37 ರನ್ ಗಳಿಸಿದರು.
ಪೆರ್ರಿ ಮತ್ತು ರಿಚಾ 4ನೇ ವಿಕೆಟ್ಗೆ 74 ರನ್ ಸೇರಿಸಿದರು. ಕೊನೆಯ 4 ಓವರ್ನಲ್ಲಿ ಆರ್ಸಿಬಿ 53 ರನ್ ಗಳಿಸಿತು.
ಸವಾಲಿನ ಮೊತ್ತ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಪರ ಶಫಾಲಿ ವರ್ಮಾ 0, ಮೆಗ್ ಲ್ಯಾನ್ನಿಂಗ್ 15, ಅಲೈಸ್ ಕಾಪ್ಸಿ 38 ರನ್ ಹೊಡೆದರು. ಜೆಮಿಮಾ ರಾಡ್ರಿಗಸ್ 32, ಮಾರಿಝಾನ್ ಕಾಪ್ ಅಜೇಯ 32, ಜೆಸ್ ಜೊನ್ನಾಸನ್ ಅಜೇಯ 29 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 2 ಎಸೆತ ಬಾಕಿ ಇರುವಂತೆ ಡೆಲ್ಲಿ ಗೆಲುವಿನ ದಡ ಸೇರಿತು.