ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ತನ್ನ ಅಸಲಿ ಸಾಮರ್ಥ್ಯವನ್ನು ತೋರಿಸಿ ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಆರ್ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ 189 ರನ್ ಗುರಿಯನ್ನು ಇನ್ನು 27 ಎಸೆತ ಬಾಕಿ ಇರುವಂತೆ ಗೆಲುವಿನ ದಡ ಸೇರಿ ಅತಿ ದೊಡ್ಡ ಗೆಲುವು ದಾಖಲಿಸಿದೆ.
ಆರ್ಸಿಬಿ ಪರ ಸೋಫಿಯಾ ಡಿವೈನ್ (36 ಎಸೆತ 99 ರನ್) ಸ್ಫೋಟಕ ಬ್ಯಾಟಿಂಗ್ ತಂಡದ ನೆಟ್ ರನ್ ರೇಟ್ ಸುಧಾರಿಸಲು ನೆರವಾದರು. 20 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಸೋಫಿಯಾ 9 ಬೌಂಡರಿ 8 ಸಿಕ್ಸರ್ ಸಿಡಿಸಿದರು. ಪೆರ್ರಿ ಅಜೇಯ 15, ಹೆಥರ್ ನೈಟ್ ಅಜೇಯ 22 ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಗುಜರಾತ್ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್ ಕಲೆ ಹಾಕಿತು.
ಬೃಹತ್ ಮೊತ್ತ ಬೆನ್ನತ್ತಿದ ಆರ್ಸಿಬಿ ಪವರ್ ಪ್ಲೇನಲ್ಲಿ 77 ರನ್ ಚಚ್ಚಿತ್ತು.