ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನ ಮಹತ್ವದ ಎಲಿಮಿನೇಟರ್ನಲ್ಲಿ ಇಂದು ಮುಂಬೈ ಇಂಡಿಯನ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಗೆದ್ದ ತಂಡಗಳು ಫೈನಲ್ ತಲುಪಲಿದೆ.
ಮೊನ್ನೆ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಯುಪಿ ವಾರಿಯರಸ್ ಅಂಕಪಟ್ಟಿಯಲ್ಲಿ ಅಗ್ರ ಮೂರು ಸ್ಥಾನಗಳನ್ನು ಪಡೆದು ನಾಕೌಟ್ ಹಂತ ತಲುಪಿದವು.
ಮುಂಬೈ ಇಂಡಿಯನ್ಸ್ ಸತತ ಐದು ಪಂದ್ಯಗಳನ್ನು ಗೆದ್ದುಕೊಂಡಿತು. ಫೈನಲ್ಗೆ ನೇರವಾಗಿ ಅರ್ಹತೆ ಪಡೆಯಬೇಕಿದ್ದ ಮುಂಬೈ ತಂಡ ಯುಪಿ ವಾರಿಯರ್ಸ್ ವಿರುದ್ಧ ಸೋತಿದ್ದಿರಿಂದ ಫೈನಲ್ಗೆ ನೇರವಾಗಿ ಪಡೆಯಲು ಸಾಧ್ಯವಾಗಲಿಲ್ಲ.
ಇದರ ಲಾಭ ಪಡೆದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಯ ಪಂದ್ಯವನ್ನು ಗೆದ್ದು ಫೈನಲ್ಗೆ ಎಂಟ್ರಿಕೊಟ್ಟಿತ್ತು .
ಫೈನಲ್ಗೆ ಹೋಗಬೇಕಿದ್ದಲ್ಲಿ ಮುಂಬೈ ಇಂಡಿಯನ್ಸ್ ಯುಪಿ ವಿರುದ್ಧ ಗೆಲ್ಲಲೇಬೇಕಿದೆ.
ಹರ್ಮನ್ ಪ್ರೀತ್ ನೇತೃತ್ವದ ಮುಂಬೈ ತಂಡ ಅನುಭವಿ ಆಲ್ರೌಂಡರ್ಗಳಿದ್ದಾರೆ. ಪ್ಲೇ ಆಫ್ಗೆ ಎಂಟ್ರಿ ಪಡೆದ ಮೊದಲ ತಂಡವಾಗಿದೆ. ಅನುಭವಿಗಳನ್ನಿಟ್ಟುಕೊಂಡು ಮುಂಬೈ ಮತ್ತೆ ಫೈನಲ್ಗೆ ಎಂಟ್ರಿ ಕೊಡಲು ಸಜ್ಜಾಗಿದೆ.
ಮುಂಬೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದು ಯುಪಿ ತಂಡ. ಗ್ರೇಸ್ ಹ್ಯಾರಿಸ್ ಹಾಗೂ ಸೋಫಿ ಎಕ್ಲಾಸ್ಟೋನ್ ಮುಂಬೈ ಕಟ್ಟಿಹಾಕಲು ಹೋರಾಡಲಿದ್ದಾರೆ.
ಯುಪಿ ತಂಡ ಆರಂಭದಲ್ಲಿ ಎಡವಿದರೂ ನಂತರ ಅಮೋಘ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರನೆ ಸ್ಥಾನ ಪಡೆಯಿತು.