ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗೆಲುವಿನ ಓಟ ಮುಂದುವರೆಸಿರುವ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಫ್ಲೇಆಫ್ ಗೇರಿದ ಮೊದಲ ತಂಡ ಎನಿಸಿದೆ.
ಗುಜರಾತ್ ವಿರುದ್ಧ 55 ರನ್ ಗೆಲುವು ದಾಖಲಿಸಿತು. ಐದು ಪಂದ್ಯಗಳ ನಾಲ್ಕನೆ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಮುಂಬೈ ಪರ ನಾಯಕಿ ಹರ್ಮನ್ ಪ್ರೀತ್ ಕೌರ್ 30 ಎಸೆತಗಳಲ್ಲಿ 51 ರನ್ ಚಚ್ಚಿದರು.ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಸಾಧನೆ ಮಾಡಿದರು.
ಯಸ್ತಿಕಾ ಭಾಟಿಯಾ 44, ನ್ಯಾಥಲಿ ಸ್ಕೀವರ್ 36 ರನ್ ಹೊಡೆದರು. ಮುಂಬೈ 8 ವಿಕೆಟ್ ನಷ್ಟಕ್ಕೆ 162 ರನ್ ಕಲೆ ಹಾಕಿತು.
ಸವಾಲಿನ ಮೊತ್ತ ಬೆನ್ನತ್ತಿದ ಗುಜರಾತ್ ಜೈಂಟ್ಸ್ ರನ್ ಖಾತೆ ತೆರೆಯುವ ಮುನ್ನವೇ ಆಘಾತ ಅನುಭವಿಸಿತು. ಹರ್ಲಿನ್ ಡಿಯೊಲ್ 22, ಮೇಘನಾ 16 ಇವರಿಬ್ಬರು ಪೆವಿಲಿಯನ್ ಸೇರುತ್ತಿದ್ದಂತೆ ತಂಡ ಸೋಲಿನತ್ತ ಮುಖ ಮಾಡಿತ.
ಮುಂಬೈ ಪರ ಹೇಲಿ ಮ್ಯಾಥ್ಯೂಸ್ ಮತ್ತು ಸ್ಕೀವರ್ ತಲಾ 3 ವಿಕೆಟ್ ಪಡೆದರು.