ಪ್ರತಿಷ್ಠಿತ ವಿಶ್ವ ಟೇಬಲ್ ಟೆನಿಸ್ ಇಂದಿನಿಂದ ಗೋವಾದಲ್ಲಿ ಆರಂಭವಾಗಲಿದೆ. ಭಾರತದ ತಾರಾ ಟೇಬಲ್ ಟೆನಿಸ್ ಆಟಗಾರರಾದ ಅಚಂತಾ ಶರತ್ ಕಮಲ್ ಮತ್ತು ಮಣಿಕಾ ಭಾತ್ರ ಕಣದಲ್ಲಿದ್ದಾರೆ.
ಪಣಜಿಯ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಒಲಿಂಪಿಕ್ ಚಾಂಪಿಯನ್ಗಳಾದ ಮಾ ಲಾಂಗ್ ಮತ್ತು ಚೆನ್ ಮೆಂಗ್ ಸೇರಿದಂತೆ ವಿಶ್ವದ ತಾರಾ ಆಟಗಾಗರರು ಆಡುತ್ತಿದ್ದಾರೆ.
ಅಗ್ರ ಮೂರು ರ್ಯಾಂಕ್ ಪಡೆದಿರುವ ಚೀನಾದ ಪುರುಷರ ಮತ್ತು ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿವೆ. ಪುರುಷರ ಸಿಂಗಲ್ಸ್ನಲ್ಲಿ ನಂ. 1 ಆಟಗಾರ ಜೆನ್ಡಾಂಗ್ ಅತ್ಯುತ್ತಮ ಆಟಗಾರರಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಭಾರತದ ಕಾಮನ್ವೆಲ್ತ್ ಚಿನ್ನದ ಪದಕ ವಿಜೇತ ಅಚಂತಾ ಶರತ್ ಕಮಲ್ ಸಹ ಆಟಗಾರನಾಗಿ ಸತ್ಯನ್ ಜ್ಞಾನಶೇಖರನ್, ಪಾಯಾಸ್ ಜೈನ್ ಮತ್ತು ವೆಸ್ಲಿ ಡೊ ರೊಸಾರಿಯೊ ಸಿಂಗಲ್ಸ್ ಆಡಲಿದ್ದಾರೆ.
ವಿಶ್ವದ ನಂ.4ನೇ ಆಟಗಾರ ಜಪಾನ್ನ ತೊಮಾಕ್ಜು ಹಾರಿಮೊಟೊ ಸ್ವೀಡನ್ನ ಟ್ರುಲ್ಸ್ ಮೊರೆಗಾರ್ಡ್, ಲಿನ್ ಯನ್ ಮತು ಸ್ಲೊವೆನಿಯಾದ ಡಾರ್ಕೊ ಜೊರಗಿಕ್ ತಾರಾ ಆಟಗಾರರಾಗಿದ್ದಾರೆ.
ಮಹಿಳಾ ವಿಭಾಗದಲ್ಲಿ 34ನೇ ಶ್ರೇಯಾಂಕಿತ ಆಟಗಾರ್ತಿ ಮಣಿಕಾ ಭಾತ್ರ, ಶ್ರೀಜಾ ಅಕುಲಾ ಮತ್ತು ಸಹಾನಾ ಸೈನಿ ತರಾ ಆಟಗಾರ್ತಿಯಾಗಿದ್ದಾರೆ. ಮಣಿಕಾ ಭಾತ್ರ ಐಟಿಟಿಎಫ್-ಎಟಿಟಿಯು ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದರು.