World Table Tennis Championships – ಜರ್ಮನಿಗೆ ಶಾಕ್ ನೀಡಿದ ಭಾರತ- ಸಾಥಿಯನ್ ಭರ್ಜರಿ ಆಟ
ವಿಶ್ವ ಟೇಬಲ್ ಚಾಂಪಿಯನ್ ಷಿಪ್ ನಲ್ಲಿ ಭಾರತ ತಂಡ ರೋಚಕ ಗೆಲುವು ಸಾಧಿಸಿದೆ. ಗ್ರೂಪ್ ಹಂತದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಜರ್ಮನಿ ತಂಡಕ್ಕೆ ಆಘಾತ ನೀಡಿದೆ. ಜರ್ಮನಿ ತಂಡವನ್ನು 1-3ರಿಂದ ಮಣಿಸಿದೆ.
ಭಾರತದ ಸ್ಟಾರ್ ಆಟಗಾರ ಜಿ. ಸಾಥಿಯನ್ ಅವರು ಎರಡೂ ಸಿಂಗಲ್ಸ್ ಪಂದ್ಯಗಳನ್ನು ಗೆದ್ದುಕೊಂಡು ಭಾರತದ ರೋಚಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ವಿಶ್ವದ 9ನೇ ಶ್ರೇಯಾಂಕಿತ ಡಂಗ್ ಕ್ಯೂ ಅವರನ್ನು ಸೋಲಿಸಿ ಭಾರತಕ್ಕೆ ಅಚ್ಚರಿಯ ಗೆಲುವನ್ನು ತಂದುಕೊಟ್ಟರು.
ವಿಶ್ವದ 37ನೇ ಶ್ರೇಯಾಂಕಿತ ಸಾಥಿಯನ್ 11-13, 4-11, 11-8, 11-4. 11-9ರಿಂದ ಡ್ಯುಡಾ ಬೆನೆಡಿಕ್ಟ್ ಅವರನ್ನು ಮಣಿಸಿದ್ರು. ಎರಡನೇ ಸಿಂಗಲ್ಸ್ ನಲ್ಲಿ ಡಂಗ್ ಕ್ಯು ಅವರನ್ನು 10-12, 7-11, 11-8, 11-8, 11-9ರಿಂದ ಪರಾಭವಗೊಳಿಸಿದ್ರು.