ಮಹಿಳಾ ಏಷ್ಯಾ ಕಪ್ ಹಾಕಿ – ಮಲೇಶಿಯಾ ವಿರುದ್ದ ಭಾರತಕ್ಕೆ ಭರ್ಜರಿ ಜಯ
ಏಷ್ಯಾ ಕಪ್ ಮಹಿಳಾ ಹಾಕಿ ಟೂರ್ನಿಯಲ್ಲಿ ಭಾರತ ತಂಡ ಭರ್ಜರಿ ಜಯ ದಾಖಲಿಸಿದೆ.
ಮಲೇಶಿಯಾ ವಿರುದ್ಧದ ಪಂದ್ಯದಲ್ಲಿ ಗೋಲುಗಳ ಸುರಿಮಳೆಗೈದ ಭಾರತ ಮಹಿಳಾ ತಂಡ 9-0 ಗೋಲುಗಳಿಂದ ಗೆಲುವು ದಾಖಲಿಸಿತ್ತು.
ಭಾರತ ಮಹಿಳಾ ಆಟಗಾರ್ತಿಯ ಆಕ್ರಮಣಕಾರಿ ಆಟದ ಮುಂದೆ ಮಲೇಶಿಯಾ ತಂಡ ತಬ್ಬಿಬ್ಬುಗೊಂಡಿತ್ತು. ಮೊದಲ ಎರಡು ಕ್ವಾರ್ಟರ್ ನಲ್ಲಿ ನಾಲ್ಕು ಗೋಲು ದಾಖಲಿಸಿದ್ದಭಾರತ ಮಹಿಳಾ ತಂಡ ಪಂದ್ಯದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿಕೊಂಡಿತ್ತು. ಹೊಂದಾಣಿಕೆಯ ಆಟದ ಮೂಲಕ ಗಮನ ಸೆಳೆದ ಭಾರತ ಮಹಿಳಾ ತಂಡದ ಅಂತಿಮ ಎರಡು ಕ್ವಾರ್ಟರ್ ನಲ್ಲಿ ಐದು ಗೋಲು ದಾಖಲಿಸಿ ಗೆಲುವಿನ ಅಂತರವನ್ನು 9-0ಕ್ಕೇರಿಸಿಕೊಂಡಿತ್ತು.
ಭಾರತದ ಪರ ಶರ್ಮಿಲಾ ದೇವಿ, ವಂದನಾ ಕಟಾರಿಯಾ, ನವ್ ನೀತ್ ಕೌರ್, ನೇಹಾ ಗೋಯಲ್, ಮೋನಿಕ ಅವರು ಮಿಂಚಿನ ಗೋಲು ದಾಖಲಿಸಿ ಗಮನ ಸೆಳೆದ್ರು.
ಎ ಗುಂಪಿನಲ್ಲಿರುವ ಭಾರತ ಮಹಿಳಾ ತಂಡಕ್ಕೆ ಜಪಾನ್, ಮಲೇಶಿಯಾ ಮತ್ತು ಸಿಂಗಾಪುರ ತಂಡಗಳು ಸವಾಲು ಒಡ್ಡಲಿವೆ.