ಅಗ್ರ ಮಹಿಳಾ ಬಾಕ್ಸರ್ಗಳಾದ ನಿಖಾತ್ ಜರೀನ್, ನೀತು ಗಂಗಾಸ್, ಮನೀಶಾ ಮೌನ್ ಮಹಿಳಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಆಯಾಸದಿಂದ ಬಳಲಿದ್ದ ತಾರಾ ಬಾಕ್ಸರ್ ನಿಖಾತ್ ಜರೀನ್ ಮೆಕ್ಸಿಕೊದ ಪಾಟ್ರಿಕಾ ಅಲ್ವೆರೇಜ್ ವಿರುದ್ಧ 5-0 ಅಂಕಗಳಿಂದ ಗೆದ್ದರು.
ಕಾಮನ್ವೆಲ್ತ್ ಕ್ರೀಡಾಕೂಟದ ಚಾಂಪಿಯನ್ ಅಲ್ವರೇಜ್ ಹೆರ್ರೆರಾ (48ಕೆಜಿ) ತಜಕಿಸ್ತಾನದ ಸುಮಾಯಿಯಾ ಕ್ವಾಸಿಮೊವಾ ವಿರುದ್ಧ ಮೊದಲ ಬಾರಿ ಗೆದ್ದುರ. ಕಳೆದ ಬಾರಿಯ ಕಂಚಿನ ಪದಕ ವಿಜೇತೆ ಮನೀಶಾ ಮೌನ್ (57ಕೆಜಿ) ಟರ್ಕಿಯ ಎಲೀಫ್ ತುರ್ಹಾನ್ ವಿರುದ್ಧ ಮೂರನೆ ಸುತ್ತಿನಲ್ಲಿ ಗೆದ್ದರು.
ಆದರೆ ಸಾಕ್ಷಿ ಚೋಪ್ರಾ (63ಕೆಜಿ) ಜಪಾನ್ನ ಮಾಹಿ ಕಿಟೊ ವಿರುದ್ಧ 0-4 ಅಂಕಗಳಿಂದ ಮಣಿದರು.
ಭಾರತದ ಬಾಕ್ಸರ್ ನಿಖಾತ್ ಆಕ್ರಮಣಕಾರಿಯಾಗಿ ಆಡುವ ಮುನ್ನ ಪಂದ್ಯ ಗ್ರಹಿಸಲು ಸಮಯ ತೆಗೆದುಕೊಂಡರು. ಎದುರಾಳಿ ಹೆರೆರಾ ಅವರ ಆಕ್ರಮಕಾರಿ ದಾಳಿಯನ್ನು ನಿಖಾತ್ ಸಮರ್ಥವಾಗಿಎದುರಿಸಿದರು.
ಕಳೆದ ಆವೃತ್ತಿಯಲ್ಲಿ ಸೋತಿದ್ದ ಹೆರೆರಾ ಉತ್ತಮ ಪ್ರದರ್ಶನವನ್ನೆ ನೀಡಿದರು. ಆದರೆ ನಿಖಾತ್ ಪ್ರಾಬಲ್ಯ ಮೆರೆದರು.