ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತ ಮಹಿಳಾ ಬಾಕ್ಸರ್‍ಗಳು ಪ್ರಾಬಲ್ಯ ಮುಂದುವರೆಸಿದ್ದು ಪ್ರೀಕ್ವಾರ್ಟರ್ ಪ್ರವೇಶಿಸಿದ್ದಾರೆ.
ಮೂರನೆ ದಿನದಲ್ಲಿ ಕಾಮನ್‍ವೆಲ್ತ್ ಚಿನ್ನದ ಪದಕ ವಿಜೇತೆ ನೀತು ಗಂಗಾಸ್ (48ಕೆಜಿ) ಎದುರಾಳಿ ಕೊರಿಯಾದ ಡೊಯೆನ್ ಕಾಂಗ್ ವಿರುದ್ಧ ಗೆದ್ದರು. ಪ್ರೀತಿ (54ಕೆಜಿ) ರೊಮಾನಿಯಾದ ಲಾಕ್ರಮಿಯೊರಾ ಪೆರಿಜೊಕ್ ವಿರುದ್ಧ 4-3 ಭಿನ್ನ ನಿರ್ಧಾರದಿಂದ ಗೆದ್ದರು.
ಮಂಜು ಬಾಂಬೊರಿಯಾ (66ಕೆಜಿ) ನ್ಯೂಜಿಲೆಂಡ್‍ನ ಕಾರಾ ವ್ಹಾರೆರಹು ವಿರುದ್ಧ 5-0 ನಿರಾಯಾಸವಾಗಿ ಗೆದ್ದರು.
ಕಳೆದ ಆವೃತ್ತಿಯ ಕ್ವಾರ್ಟರ್ ಫೈನಲ್‍ನಲ್ಲಿ ಸೋತಿದ್ದ ನೀತು ಈ ಬಾರಿ ಮೊದಲ ಸುತ್ತು ಗೆದ್ದರು.
ಮತ್ತೋರ್ವ ಮಹಿಳಾ ಬಾಕ್ಸರ್ ಪ್ರೀತಿ ಆರಂಭದಲ್ಲಿ ಎದುರಾಳಿಯಿಂದ ಅಂತರ ಕಾಪಾಡಿಕೊಂಡರು. ನಂತರ ಲಾಕ್ರಮಿಯೊರಾ ಪೆರಿಜೊಕ್ ನೀಡಿದ ಪಂಚ್‍ನಿಂದ ಬೇಗೆನೆ ಚೇತರಿಸಿಕೊಂಡರು. ಮೊದಲ ಸುತ್ತು ಮುಗಿಯುವ ವೇಳೆಗೆ ಪ್ರೀತಿ 3-2 ಅಂಕಗಳಿಂದ ಮುನ್ನಡೆ ಪಡೆದಿದ್ದರು.
ಎರಡನೆ ಸುತ್ತಿನಲ್ಲಿ ಪ್ರೀತಿ 2-3 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಕೊನೆಯ ಮೂರು ನಿಮಿಷಗಳಲ್ಲಿ ಪ್ರೀತಿ ಪರಿಣಾಮಕಾರಿಯಾಗಿ ದಾಳಿ ಮಾಡಿದ್ದರಿಂದ ಮೌಲ್ಯಮಾಪಕರು ಭಾರತೀಯ ಬಾಕ್ಸರ್ ಪರವಾಗಿ ತೀರ್ಪು ನೀಡಿದರು.