ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಟೂರ್ನಿ ಇಂದಿನಿಂದ ಆರಂಭವಾಗಲಿದೆ. ಜು.3ರಿಂದ ಆರಂಭವಾಗಲಿರುವ ಟೂರ್ನಿ ಜು.16ರವರೆಗೆ ನಡೆಯಲಿದೆ.
ಹಾಲಿ ಚಾಂಪಿಯನ್ಗಳಾದ ನವೋಕ್ ಜೋಕೊವಿಕ್ ಮತ್ತು ಎಲೆನಾ ರೈಬಾಕಿನಾ ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಅಗ್ರ ಆಟಗಾರ ನವೋಕ್ ಜೋಕೊವಿಕ್ ಮಾಜಿ ಆಟಗಾರ ರೋಜರ್ ಫೆಡರರ್ ಅವರ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ. ಬ್ಜೋರ್ನ್ ಬೋರ್ಗ್ ಮತ್ತು ರೋಜರ್ ಫೆಡರರ್ ಸತತವಾಗಿ ಐದು ಬಾರಿ ವಿಂಬಲ್ಡನ್ ಟೂರ್ನಿ ಗೆದ್ದಿದ್ದಾರೆ. ಇದೀಗ ನವೋಕ್ ಜೋಕೋವಿಕ್ಗೆ ಐದನೆ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಅವಕಾಶವಿದೆ.
23 ಗ್ರ್ಯಾನ್ ಸ್ಲಾಮ್ ಗೆದ್ದಿರುವ ಸರ್ಬಿಯಾ ಆಟಗಾರನ ಗೆಲುವಿನ ಓಟವನ್ನು ತಡೆಯಲು ಯಾರಿಂದಲೂ ಸಾಧ್ಯಾವಾಗುತಿಲ್ಲ.
ಬಹುತೇಕ ವರ್ಷಗಳಲ್ಲಿ ಜೋಕೋವಿಕ್ ಆಸ್ಟ್ರೇಲಿಯಾ ಮತ್ತು ಫ್ರೆಂಚ್ ಓಪನ್ ಟೂರ್ನಿಗಳನ್ನು ಸತತವಾಗಿ ಗೆದ್ದು ಬೀಗಿದ್ದಾರೆ.
ಜೋಕೋವಿಕ್ಗೆ ಫೆಡರರ್ ಅವರ ದಾಖಲೆಯನ್ನು ಸರಿಗಟ್ಟುವ ಅವಕಾಶ ಸಿಕ್ಕಿದೆ. ಫೆಡರರ್ ಸಿಂಗಲ್ಸನಲ್ಲಿ 8 ಬಾರಿ ವಿಂಬಲ್ಡನ್ ಗೆದ್ದಿದ್ದಾರೆ. ಜೋಕೋವಿಕ್ 7 ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದಾರೆ.
36 ವರ್ಷ ವಯಸ್ಸಾಗಿದ್ದರೂ ಜೋಕೋವಿಕ್ಗೆ ಫಿಟ್ನೆಸ್ ಸಮಸ್ಯೆ ಕಾಡಿಲ್ಲ. ಫೆಡರರ್ ಮತ್ತು ನಡಾಲ್ ಫಿಟ್ನೆಸ್ ಸಮಸ್ಯೆಗೆ ಗುರಿಯಾಗಿ ಆಡಲು ಆಗುತ್ತಿಲ್ಲ.
ಉಳಿದಂತೆ ಟೂರ್ನಿಯಲ್ಲಿ ಆಡುವ ಕಾರ್ಲೊಸ್ ಅಲ್ಕರಾಜ್ ಕಳೆದ ತಿಂಗಳು ಪ್ರೆಂಚ್ ಓಪನ್ ಟೂರ್ನಿ ಆಡಿದ್ದರು. ಕಾರ್ಲೊಸ್ ಅಲ್ಕರಾಜ್ ಆತ್ಮವಿಶ್ವಾಸದಿಂದ ತೇಲಾಡುತ್ತಿದ್ದು ಜೋಕೋವಿಕ್ ಅವರಿಂದ ನಂ.1 ಪಟ್ಟ ಪಡೆದಿದ್ದಾರೆ.
ಮತ್ತೋರ್ವ ತಾರಾ ಆಟಗಾರ ಮೆಡ್ಡೆವ್ ಈ ವರ್ಷ ನಾಲ್ಕು ಪ್ರಶಸ್ತಿ ಗೆದ್ದಿದ್ದಾರೆ. ಆದರೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆಲ್ಲಲು ಪರದಾಡುತ್ತಿದ್ದಾರೆ. ಹೋಲ್ಗರ್ ರೂನೆ, ಆ್ಯಲೆಕ್ಸೆಂಡರ್ ಜ್ವೆರೆವ್, ಕ್ಯಾಸ್ಪರ್ ರೂಡ್, ಕ್ಯಾಮರೊನ್ ನೋರ್ರಿ ಮತ್ತು ಟಿಸಿಟಿಸಿಪಾಸ್ ಪುರುಷರ ಸಿಂಗಲ್ಸ್ ಡ್ರಾನಲ್ಲಿ ರೋಚಕತೆ ತಂದುಕೊಡ ಬೇಕಿದೆ.
ಇಗಾ ಸ್ವಿಯಾಟಿಕ್, ಕೊಕೊ ಗೌಫ್ ಪೇವರಿಟ್
ಮಹಿಳಾ ವಿಭಾಗದಲ್ಲಿ ಕಳೆದ ವರ್ಷ ಕಜಕಿಸ್ತಾನದ ಎಲೆನಾ ರಿಬಾಕಿನಾ ಮಹಿಳಾ ಸಿಂಗಲ್ಸ್ನ ಫೈನಲ್ಲ್ಲಿ ಒನ್ಸ್ ಜಾಬೆರು ಅವರನ್ನು ಮಣಸಿ ಪ್ರಶಸ್ತಿ ಗೆದ್ದಿದ್ದರು. ಈ ಬಾರಿ ಇಗಾ ಸ್ವಿಯಾಟಿಕ್ ಮತ್ತು ಕೊಕೊ ಗೌಫ್ ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯರಾಗಿದ್ದಾರೆ. ಸದ್ಯ ರೈನಾಕಿನಾ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಇಗಾ ಸ್ವಿಯಟೆಕ್ ವಿಶ್ವದ ನಂ.1 ಆಟಗಾರ್ತಿಯಾಗಿದ್ದು ಹುಲ್ಲಿನ ಮೇಲೆ ಪ್ರಭುತ್ವ ಸಾಧಿಸಬೇಕಿದೆ. ಈಗಾಗಲೇ ಫ್ರೆಂಚ್ ಓಪನ್ ಗೆದ್ದಿರುವುದರಿಂದ ಮತ್ತೊಮ್ಮೆ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದೆ.
ಅರ್ಯಾನಾ ಸಾಬಾಲೆಂಕಾ ಫ್ರೆಂಚ್ ಓಪನ್ ಸೆಮಿಫೈನಲ್ಲ್ಲಿ ಸೋಲು ಕಂಡರು. ಮೂರು ಅಗ್ರ ಆಟಗಾರ್ತಿಯರ ಪೈಕಿ ಆರ್ಯಾನಾ ಸಾಬಾಲೆಂಕಾ ಕೂಡ ಒಬ್ಬರಾಗಿದ್ದಾರೆ.
ಜೆಸ್ಸಿಕಾ ಪೆಗುಲಾ, ಕಾರೋಲಿನ್ ಮತ್ತು ಮಾರಿಯಾ ಸಾಕ್ಕಾರಿ, ಕಾರೋಲಿನ್ ಗಾರ್ಸಿಯಾ, ಮಾರಿಯಾ ಸಾಕ್ಕಾರಿ, ಮಿರ್ರಾ ಆ್ಯಂಡ್ರೀವಾ ಮತ್ತು ಕೊಕೊ ಗೌಫ್ ಕಣದಲ್ಲಿದ್ದಾರೆ.