ಲಿಟನ್ ದಾಸ್(53) ಹಾಗೂ ತಮೀಮ್ ಇಕ್ಬಾಲ್(46) ಜವಾಬ್ದಾರಿಯ ಬ್ಯಾಟಿಂಗ್ ನಡುವೆಯೂ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ, 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್‌ಗಳ ಸಾಧಾರಣ ಮೊತ್ತಕ್ಕೆ ಆಲೌಟ್ ಆಗಿದೆ.
ಸೆಂಟ್ ಲೂಸಿಯಾದಲ್ಲಿ ಶುಕ್ರವಾರ ಆರಂಭಗೊಂಡ 2ನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬಳಿಕ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ನೀಸರ ಬ್ಯಾಟಿಂಗ್ ಪ್ರದರ್ಶಿಸಿತು. ಪರಿಣಾಮ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್, ಮೊದಲ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 67 ರನ್‌ಗಳಿಸಿದ್ದು, ಆರಂಭಿಕರಾದ ನಾಯಕ ಕ್ರೇಗ್ ಬ್ರಾಥ್ವೇಟ್(30*) ಹಾಗೂ ಜಾನ್ ಕ್ಯಾಂಪ್ಬೆಲ್(32*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬಾಂಗ್ಲಾ ನೀರಸ ಬ್ಯಾಟಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬಾಂಗ್ಲಾದೇಶ ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕನಾಗಿ ಕಣಕ್ಕಿಳಿದ ಹಸನ್ ಜಾಯ್(10) ರನ್‌ಗಳಿಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ಶಂಟೋ(26) ಹಾಗೂ ಅನ್ಮೋಲ್(23) ಬಹುಬೇಗನೆ ಹೊರ ನಡೆದರು. ಈ ವೇಳೆ ಜೊತೆಯಾದ ಲಿಟನ್ ದಾಸ್(53) ಹಾಗೂ ತಮೀಮ್ ಇಕ್ಬಾಲ್(46) ಜವಾಬ್ದಾರಿಯ ಆಟದಿಂದ ತಂಡಕ್ಕೆ ಚೇತರಿಕೆ ನೀಡಿದರು. ಇದಾದ ಬಳಿಕ ನಾಯಕ ಶಕೀಬ್-ಅಲ್-ಹಸನ್(8), ನುರುಲ್ ಹಸನ್(7) ಹಾಗೂ ಮೆಹದಿ ಹಸನ್(9) ನಿರೀಕ್ಷಿತ ಆಟವಾಡಲಿಲ್ಲ. ಕೊನೆ ಹಂತದಲ್ಲಿ ಕಣಕ್ಕಿಳಿದ ಎಬ್ದೋತ್ ಹೊಸೈನ್(21*) ಹಾಗೂ ಶೊರಿಫುಲ್ ಇಸ್ಲಾಮ್(26) ಅಲ್ಪಮೊತ್ತದ ರನ್‌ಗಳಿಸಿದರು. ವಿಂಡೀಸ್ ಪರ ಜೈಡನ್ ಸೇಲ್ಸ್ ಹಾಗೂ ಅಲ್ಜಾರಿ ಜೋಸೆಫ್ ತಲಾ 3 ವಿಕೆಟ್ ಪಡೆದರೆ. ಆಂಡರ್ಸನ್ ಫಿಲಿಪ್ ಮತ್ತು ಮೈಯರ್ಸ್ ತಲಾ 2 ವಿಕೆಟ್ ಪಡೆದರು.
ವಿಂಡೀಸ್ ಉತ್ತಮ ಆರಂಭ:
ಪ್ರವಾಸಿ ಬಾಂಗ್ಲದೇಶವನ್ನ 234 ರನ್‌ಗಳಿಗೆ ಕಡಿವಾಣ ಹಾಕಿದ ವೆಸ್ಟ್ ಇಂಡೀಸ್, ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಕಂಡಿದೆ. ಕೆರೆಬಿಯನ್ನರ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಕ್ರೇಗ್ ಬ್ರಾಥ್ವೈಟ್(30*) ಹಾಗೂ ಜಾನ್ ಕ್ಯಾಂಪ್ಬೆಲ್(32*) ಮೊದಲ ವಿಕೆಟ್‌ಗೆ 67 ರನ್‌ಗಳಿಸುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದರು. ಸದ್ಯ 167 ರನ್‌ಗಳ ಹಿನ್ನಡೆಯೊಂದಿಗೆ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.