ಇಂಡಿಯನ್ ಪ್ರೀಮಿಯರ್ ಲೀಗ್ನ 15 ನೇ ಆವೃತ್ತಿ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಟೂರ್ನಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಎರಡು ತಂಡಗಳು ಅಂಕ ಪಟ್ಟಿಯಲ್ಲಿ ಅಗ್ರ ನಾಲ್ಕನೇ ಸ್ಥಾನದಲ್ಲಿವೆ. ಈ ನಾಲ್ಕೂ ತಂಡಗಳ ವಿಶೇಷತೆ ಎಂದರೆ ಡೆತ್ ಓವರ್ ಗಳಲ್ಲಿ ಮಿಂಚಬಲ್ಲ ಆಟಗಾರರು ಈ ತಂಡದಲ್ಲಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ಡೇವಿಡ್ ಮಿಲ್ಲರ್ ಗುಜರಾತ್ ತಂಡದಲ್ಲಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಮಿಲ್ಲರ್ ಅವರ 94 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದ್ದರು. ಇವರ ಹೊರತಾಗಿ ನಾಯಕ ಹಾರ್ದಿಕ್ ಪಾಂಡ್ಯ ಈ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ.
ಈ ಬಾರಿ ಆರ್ಸಿಬಿಯಲ್ಲಿ ಈ ಜವಾಬ್ದಾರಿ ದಿನೇಶ್ ಕಾರ್ತಿಕ್ ಹೊತ್ತುಕೊಂಡಿದ್ದು, ಟಿ20 ವಿಶ್ವಕಪ್ ತಂಡ ಸೇರುವ ಕನಸಿನಲ್ಲಿದ್ದಾರೆ. ತಂಡ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ದಿನೇಶ್ ಔಟ್ ಆಗಿದ್ದರು. ಉಳಿದಂತೆ ಕೊನೆಯ ಓವರ್ ಗಳಲ್ಲಿ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಇವರು ಹೊಂದಿದ್ದಾರೆ.
ಶಿಮ್ರಾನ್ ಹೆಟ್ಮೆಯರ್ ರಾಜಸ್ಥಾನ ಪರ ಈ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಹಲವು ಪಂದ್ಯಗಳಲ್ಲಿ ತಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೊಸ ತಂಡ ಲಖನೌನಲ್ಲಿ ದೀಪಕ್ ಹೂಡಾ ಮತ್ತು ಯುವ ಆಯುಷ್ ಬದೋನಿ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದಾರೆ.
ಈ ಋತುವಿನಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳ ಪಟ್ಟಿುಯಲ್ಲಿ ಶಿಮ್ರಾನ್ ಹೆಟ್ಮೆಯರ್ 249 ಸ್ಟ್ರೈಕ್ ರೇಟ್ನಲ್ಲಿ 152 ರನ್ ಗಳಿಸಿದ್ದಾರೆ. ದಿನೇಶ್ ಕಾರ್ತಿಕ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ, ಅವರು 231 ಸ್ಟ್ರೈಕ್ ರೇಟ್ನಲ್ಲಿ 148 ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಧೋನಿ ಮೂರನೇ ಸ್ಥಾನದಲ್ಲಿದ್ದು, 207 ಸ್ಟ್ರೈಕ್ ರೇಟ್ನಲ್ಲಿ 91 ರನ್ ಗಳಿಸಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಧೋನಿ ಅವರ ಬ್ಯಾಟಿಂಗ್ ಶೈಲಿಗೆ ಅಭಿಮಾನಿಗಳು ಮನಸೋತಿದ್ದಾರೆ.