West Indies T20I squad -ಭಾರತ -ವೆಸ್ಟ್ ಇಂಡೀಸ್ ಟಿ-20 ಸರಣಿ -ಪೊಲಾರ್ಡ್ ಸಾರಥ್ಯದ ತಂಡ ಹೀಗಿದೆ..!
ಟೀಮ್ ಇಂಡಿಯಾದ ವಿರುದ್ದದ ಟಿ-20 ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ.
ಸದ್ಯ ಇಂಗ್ಲೆಂಡ್ ವಿರುದ್ದ ಐದು ಪಂದ್ಯಗಳ ಟಿ-20 ಸರಣಿಯನ್ನು ಆಡುತ್ತಿರುವ ವೆಸ್ಟ್ ಇಂಡೀಸ್ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳ ಸರಣಿ 2-2ರಿಂದ ಸಮಬಲಗೊಂಡಿದೆ. West Indies T20I squad to face India –
ಐರ್ಲೆಂಡ್ ವಿರುದ್ದ ಮುಖ ಭಂಗ ಅನುಭವಿಸಿದ್ದ ವೆಸ್ಟ್ ಇಂಡೀಸ್ ಆಂಗ್ಲರ ನಾಡಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ.
ಹೀಗಾಗಿ ಭಾರತ ವಿರುದ್ದದ ಟಿ-20 ಸರಣಿಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ. ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಬದಲಾವಣೆ ಮಾಡುವ ಮನಸ್ಸು ಮಾಡಿಲ್ಲ.
ಶಿಮ್ರೋನ್ ಹೆಟ್ಮೇರ್ ಅವರು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಯ್ಕೆಗ ಲಭ್ಯರಾಗಿಲ್ಲ. ಇನ್ನುಳಿದಂತೆ ತಂಡ ಅನುಭವಿ ಮತ್ತು ಯುವ ಆಟಗಾರರಿಂದ ಕೂಡಿದೆ. ಅಲ್ಲದೆ ಕಿರಾನ್ ಪೊಲಾರ್ಡ್ ಸಾರಥ್ಯದ ವೆಸ್ಟ್ ಇಂಡೀಸ್ ತಂಡ ಉತ್ತಮ ಪ್ರದರ್ಶನ ನೀಡಿದೆ. ಯುವ ಆಟಗಾರರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡುತ್ತಿದ್ದಾರೆ ಎಂದು ವೆಸ್ಟ್ ಇಂಡೀಸ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಡೆಸ್ಮಂಟ್ ಹೆನ್ಸ್ ಅವರು ಹೇಳಿದ್ದಾರೆ.
ಇನ್ನು ನಾಯಕ ಕಿರಾನ್ ಪೊಲಾರ್ಡ್ ಮತ್ತು ತಂಡದ ಇತರೆ ಆಟಗಾರರ ನಡುವೆ ಹೊಂದಾಣಿಕೆ ಇಲ್ಲ ಎಂಬ ಸುದ್ದಿಯನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಳ್ಳಿ ಹಾಕಿದೆ. ಇದು ಆಧಾರ ರಹಿತವಾದ ವರದಿ. ತಂಡ ಒಗ್ಗಟ್ಟಿನಿಂದ ಇದೆ. ಪೊಲಾರ್ಡ್ ನಾಯಕನಾಗಿ ತಂಡವನ್ನು ಉತ್ತಮವಾಗಿಯೇ ಮುನ್ನಡೆಸುತ್ತಿದ್ದಾರೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ.
ಇನ್ನು ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಫೆಬ್ರವರಿ 6ರಿಂದ ಆರಂಭವಾಗಲಿದೆ. ಫೆಬ್ರವರಿ 16ರಿಂದ ಟಿ-20 ಸರಣಿ ನಡೆಯಲಿದೆ. ಏಕದಿನ ಸರಣಿ ಅಹಮದಾಬಾದ್ ನಲ್ಲಿ ನಡೆದ್ರೆ, ಟಿ-20 ಸರಣಿ ಕೊಲ್ಕತ್ತಾದಲ್ಲಿ ನಡೆಯಲಿದೆ.
ಹಾಗೇ ಭಾರತ ತಂಡವನ್ನು ರೋಹಿತ್ ಶರ್ಮಾ ಅವರು ಮುನ್ನಡೆಸಲಿದ್ದಾರೆ.
ಭಾರತ ವಿರುದ್ದದ ಟಿ-20 ಸರಣಿಗೆ ವೆಸ್ಟ್ ಇಂಡೀಸ್
ಕಿರಾನ್ ಪೊಲಾರ್ಡ್ (ನಾಯಕ), ನಿಕೊಲಾಸ್ ಪೂರನ್ (ಉಪನಾಯಕ), ಫ್ಯಾಬಿಯನ್ ಆಲೆನ್, ಡರೇನ್ ಬ್ರಾವೋ, ರೋಸ್ಟನ್ ಚೇಸ್, ಶೆಲ್ಡನ್ ಕಾಟ್ರೆಲ್, ಡಾಮಿನಿಕ್ ಡ್ರಾಕ್ಸ್, ಜೇಸನ್ ಹೊಲ್ಡರ್, ಶಾಯ್ ಹೋಪ್, ಆಕೀಲ್ ಹುಸೇನ್, ಬ್ರೆಂಡನ್ ಕಿಂಗ್, ರೊವ್ಮನ್ ಪಾವೆಲ್, ರೊಮಾರಿಯೊ ಶಫೆರ್ಡ್, ಒಡಿಯನ್ ಸ್ಮಿತ್, ಕೈಲ್ ಮಾಯೆರ್ಸ್, ಹೇಡನ್ ವಾಲ್ಶ್ ಜೂನಿಯರ್.