Washington Sundar – ಫಿಟ್ & ಫೈನ್ ಆಗಿ ಕೌಂಟಿ ಕ್ರಿಕೆಟ್ ನಲ್ಲಿ ವಾಷಿಂಗ್ಟನ್ ಸುಂದರ್..!
ಟೀಮ್ ಇಂಡಿಯಾದ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರು ಫುಲ್ ಫಿಟ್ ಆಗಿದ್ದಾರೆ.
ಕೈ ನೋವಿನಿಂದ ಬಳಲುತ್ತಿದ್ದ ವಾಷಿಂಗ್ಟನ್ ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಇದೀಗ ಫುಲ್ ಫಿಟ್ ಆಂಡ್ ಫೈನ್ ಆಗಿರುವ ವಾಷಿಂಗ್ಟನ್ ಸುಂದರ್ ಅವರು ಟೀಮ್ ಇಂಡಿಯಾಗೆ ಕಮ್ ಬ್ಯಾಕ್ ಮಾಡುವ ಹಾದಿಯಲ್ಲಿದ್ದಾರೆ.
ಇದಕ್ಕೆ ಪೂರಕವಾಗಿ ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲ್ಯಾಂಕ್ ಶೈರ್ ತಂಡದ ಪರ ಆಡಲಿರುವ ವಾಷಿಂಗ್ಟನ್ ಸುಂದರ್ ಅವರು ಸದ್ಯದಲ್ಲೇ ಇಂಗ್ಲೆಂಡ್ ಗೆ ತೆರಳಲಿದ್ದಾರೆ.
ಲ್ಯಾಂಕ್ ಶೈರ್ ಪರ ಮೂರು ಕೌಂಟಿ ಚಾಂಪಿಯನ್ ಷಿಪ್ ಪಂದ್ಯಗಳನ್ನು ಜುಲೈ ನಲ್ಲಿ ಆಡಲಿದ್ದಾರೆ. ಹಾಗೇ 50 ಓವರ್ ಗಳ ರಾಯಲ್ ಲಂಡನ್ ಕಪ್ ಟೂರ್ನಿಯನ್ನು ಆಡಲಿದ್ದಾರೆ. Washington Sundar nearing full fitness, set to play for Lancashire

22ರ ಹರೆಯದ ತಮಿಳುನಾಡಿನ ಆಟಗಾರ ವಾಷಿಂಗ್ಟನ್ ಸುಂದರ್ ಅವರು ಕಳೆದ ಆಸ್ಟ್ರೇಲಿಯಾ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆದ್ರೆ 2021ರ ಇಂಗ್ಲೆಂಡ್ ಸರಣಿಯ ನಂತರ ವಾಷಿಂಗ್ಟನ್ ಸುಂದರ್ ಅವರು ಗಾಯದಿಂದಾಗಿ ಟೀಮ್ ಇಂಡಿಯಾದಿಂದ ದೂರವೇ ಉಳಿದುಕೊಂಡಿದ್ದರು. ಅಲ್ಲದೆ ಕಳೆದ ಐಪಿಎಲ್ ನಲ್ಲೂ ಆಡಿರಲಿಲ್ಲ. ಒಟ್ಟಿನಲ್ಲಿ ವಾಷಿಂಗ್ಟನ್ ಸುಂದರ್ ಅವರು ಕಳೆದ ಜುಲೈ ಅಂದ್ರೆ ಸುಮಾರು ಒಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ಕಮ್ ಬ್ಯಾಕ್ ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ.