ಒಂದು ಚಿತ್ರ ತೆರೆಯ ಮೇಲೆ ಬಂದು ಯಶಸ್ವಿ ಆಗುತ್ತಿದ್ದಂತೆ ಅದರಲ್ಲಿನ ಡೈಲಾಗ್ ಹಾಗೂ ಆ್ಯಕ್ಷನ್ ಅಭಿಮನಿಗಳ ಮನ ಗೆಲ್ಲುತ್ತವೆ. ಇತ್ತೀಚಿಗೆ ಪುಷ್ಪಾ ಚಿತ್ರ ರಿಲೀಸ್ ಆದಾಗಲೂ ಅಭಿಮಾನಿಗಳು ಅದರಲ್ಲಿನ ಡೈಲಾಗ್, ಆ್ಯಕ್ಟಿಂಗ್ ಮಾಡಿ ಖುಷಿ ಪಟ್ಟಿದ್ದರು. ಇಷ್ಟೇ ಏಕೆ ಈ ಮೇನಿಯಾ ಅಂಗಳಕ್ಕೂ ಎಂಟ್ರಿ ನೀಡಿತ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜಾ ಒಂದು ಪಂದ್ಯದ ವೇಳೆ ಈ ಆ್ಯಕ್ಟಿಂಗ್ ಮಾಡಿ ಅಭಿಮಾನಿಗಳನ್ನು ರಂಜಿಸಿದ್ದರು.
ಈಗ ಎಲ್ಲಿ ನೋಡಿದರೂ ಕೆಜಿಎಫ್-2 ಹವಾ. ಅದರಲ್ಲಿನ ಡೈಲಾಗ್, ಆ್ಯಕ್ಟಿಂಗ್, ಆ್ಯಕ್ಟನ್ ಸೀನ್ ಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಚಿತ್ರದ ಟೀಸರ್ ವೇಳೆ ಹಿಟ್ ಆದ ಡೈಲಾಗ್ ಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಆ್ಯಕ್ಟ್ ಮಾಡಿದ್ದಾರೆ. ನಿಜಕ್ಕೂ ಅವರ ನಟನೆ ನೋಡಿದರೆ ಹೆಮ್ಮೆ ಆಗುತ್ತದೆ.
ಕನ್ನಡ ಅರಿಯದ ವಾರ್ನರ್ ಕೆಜಿಎಫ್-2 ಚಿತ್ರಕ್ಕೆ ನಟನೆ ಮಾಡುವುದು ಎಂದರೆ ಸಣ್ಣ ವಿಚಾರ ಅಲ್ಲವೆ ಅಲ್ಲ. ವೈಲನ್ಸ್.. ವೈಲನ್ಸ್… ವೈಲನ್ಸ್ ಎಂಬ ಫುಲ್ ಹಿಟ್ ಡೈಲಾಗ್ ಗೆ ವಾರ್ನರ್ ತಮ್ಮದೇ ಧಾಟಿಯಲ್ಲಿ ನಟಿಸಿದ್ದಾರೆ. ಹೇಳಿ ಕೇಳಿ ಅವರ ಬ್ಯಾಟ್ಸ್ ಮನ್, ಬ್ಯಾಟ್ ಹಿಡಿದೆ ಆ್ಯಕ್ಟ್ ಮಾಡಿದ್ದಾರೆ.