ವಿರಾಟ್ ಕೊಹ್ಲಿ ಇನ್ನು ಟೀಮ್ ಇಂಡಿಯಾದ ನಾಯಕತ್ವದಿಂದ ಕೆಳಗೆ ಇಳಿದಿದ್ದಾರೆ. ಆದರೆ ಅವರಲ್ಲಿರುವ ನಾಯಕನನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ. ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಅಭ್ಯಾಸ ನಡೆಸಿತು. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಹಳೆಯ ಧಾಟಿಯಲ್ಲಿ ಕಾಣಿಸಿಕೊಂಡರು. ಈ ಬಗ್ಗೆ ಲಿಸ್ಟರ್ ಕೌಂಟಿ ವೀಡಿಯೊವನ್ನು ಪೋಸ್ಟ್ ಮಾಡಿದೆ, ಇದರಲ್ಲಿ ವಿರಾಟ್ ಸಹ ಆಟಗಾರರಿಗೆ ಪ್ರೇರಣೆ ನೀಡುವಂತೆ ಭಾಷಣವನ್ನು ನೀಡುತ್ತಿದ್ದಾರೆ. ಆದರೆ, ಅವರು ಹೇಳುತ್ತಿರುವುದು ಕೇಳಿಸುತ್ತಿಲ್ಲ.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಪ್ರಸ್ತುತ ಇಂಗ್ಲೆಂಡ್‌ನಲ್ಲಿದ್ದು, ಜುಲೈ 1 ರಿಂದ ಬರ್ಮಿಂಗ್ಹ್ಯಾಮ್‌ನಲ್ಲಿ ಆತಿಥೇಯರ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಈ ಪಂದ್ಯವು ಕರೋನಾದಿಂದಾಗಿ ಕಳೆದ ವರ್ಷ ಮುಂದೂಡಲ್ಪಟ್ಟ ಸರಣಿಯ ಭಾಗವಾಗಿದೆ.

ತಂಡ ಸೇರಿಕೊಂಡ ಕೋಚ್ ರಾಹುಲ್ ದ್ರಾವಿಡ್
ಮಂಗಳವಾರ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ. ಬಿಸಿಸಿಐ ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ. ದ್ರಾವಿಡ್ ಮೊದಲ ಟೆಸ್ಟ್ ಪಂದ್ಯದ ತಂತ್ರಗಾರಿಕೆಯನ್ನು ಆಟಗಾರರೊಂದಿಗೆ ಚರ್ಚಿಸಿದರು. ಇದಾದ ಬಳಿಕ ಟೀಂ ಇಂಡಿಯಾದ ಆಟಗಾರರು ವಿಭಿನ್ನ ಅಭ್ಯಾಸ ಕಸರತ್ತುಗಳನ್ನು ಪೂರ್ಣಗೊಳಿಸಿದರು.
Game mode = 𝒂𝒄𝒕𝒊𝒗𝒂𝒕𝒆𝒅 💪@imVkohli gives a 𝗽𝗮𝘀𝘀𝗶𝗼𝗻𝗮𝘁𝗲 team talk ahead of a busy day of preparations before @BCCI's Tour Match 🆚 @leicsccc.
🦊 #IndiaTourMatch | #LEIvIND pic.twitter.com/zDxP53Slxd
— Leicestershire CCC 🏏 (@leicsccc) June 21, 2022
ನಾಲ್ಕು ಟೆಸ್ಟ್ ಪಂದ್ಯಗಳ ನಂತರ, ಕರೋನಾದಿಂದಾಗಿ ಭಾರತ-ಇಂಗ್ಲೆಂಡ್ ಸರಣಿಯನ್ನು ಕಳೆದ ವರ್ಷ ಮುಂದೂಡಬೇಕಾಯಿತು. ಆ ವೇಳೆಗೆ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತ್ತು. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ನಂತರ ಭಾರತ ಎರಡನೇ ಮತ್ತು ನಾಲ್ಕನೇ ಟೆಸ್ಟ್‌ಗಳಲ್ಲಿ ಗೆಲುವು ಸಾಧಿಸಿತ್ತು. ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದೆ.

ಎರಡೂ ತಂಡಗಳ ನಾಯಕರು ಬದಲು
ಕಳೆದ ವರ್ಷ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಮತ್ತು ಆತಿಥೇಯ ತಂಡದ ಪರ ಜೋ ರೂಟ್ ತಂಡವನ್ನು ಮುನ್ನಡೆಸಿದ್ದರು. ಇದೀಗ ಎರಡೂ ತಂಡಗಳ ನಾಯಕರನ್ನು ಬದಲಾಯಿಸಲಾಗಿದೆ. ಭಾರತದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದ್ದು, ಇಂಗ್ಲೆಂಡ್ ಬೆನ್ ಸ್ಟೋಕ್ಸ್‌ಗೆ ಪಟ್ ಕಟ್ಟಿದೆ.