Virat Kohli ; ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅವರ ಖಾಸಗಿ ರೂಮ್ನ ವಿಡಿಯೋ ಸೋರಿಕೆಯಾಗಿದೆ. ಈ ಬಗ್ಗೆ ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬೇಸರ ಹೊರಹಾಕಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಡುತ್ತಿರುವ ಟೀಮ್ ಇಂಡಿಯಾಕ್ಕೆ ಮುಜುಗರ ಅನುಭವಿಸುತ್ತಲ್ಲೆ ಬಂದಿದೆ. ಮೊನ್ನೆಯಷ್ಟೆ ವ್ಯವಸ್ಥೆ ವಿಚಾರವಾಗಿ ಹಾಗೂ ಊಟದ ವಿಚಾರವಾಗಿ ಐಸಿಸಿಗೆ ದೂರು ನೀಡಿತ್ತು.
ಇದೀಗ ವಿರಾಟ್ ಕೊಹ್ಲಿ ಅವರ ಖಾಸಗಿ ರೂಮ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಯಾರು ಇಲ್ಲದ ಸಮಯದಲ್ಲಿ ವಿರಾಟ್ ಕೊಹ್ಲಿ ರೂಮ್ಗೆ ಅನಾಮಿಕ ವ್ಯಕ್ತಿಯೊಬ್ಬ ನುಗ್ಗಿ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾನೆ.
ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್ ಮೈದಾನದಲ್ಲಿ ಆಡುವ ವೇಳೆ ಈ ಘಟನೆ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ವಿರಾಟ್ ಕೊಹ್ಲಿ ಕೋಪಿಸಿಕೊಂಡಿದ್ದಾರೆ.
ಈ ಕುರಿತು ವಿರಾಟ್,ಅಭಿಮಾನಿಗಳಿಗೆ ತನ್ನ ಮೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು, ಭೇಟಿಯಾಗಬೇಕು ಎಂಬ ಆಸೆ ಇರುತ್ತದೆ ನಿಜ, ಆ ಭಾವನೆ ನನಗೆ ಅರ್ಥವಾಘುತ್ತದೆ.
ಅದನ್ನು ನಾನು ಗೌರವಿಸುತ್ತೇನೆ ಕೂಡ.ಆದರೆ ಈ ವಿಡಿಯೋ ನನ್ನ ಖಾಸಗಿತನಕ್ಕೆ ಧಕ್ಕೆ ತಂದಿದೆ.ನನ್ನ ವೈಯಕ್ತಿಕ ಹೋಟೆಲ್ ರೂಮ್ನಲ್ಲೆ ನನಗೆ ಖಾಸಗಿತನ ಇಲ್ಲವೆಂದರೆ ನನಗೆ ಪರ್ಸನ್ಲ್ ಸ್ಪೇಸ್ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ್ದರೆ.
ಈ ವಿಚಾರದಿಂದ ನಾನು ಖುಷಿಯಲ್ಲಿ ಇಲ್ಲ. ದಯವಿಟ್ಟು ಜನರ ಖಾಸಗಿ ವಿಚಾರಕ್ಕೆ ಗೌರವ ನೀಡಿ. ಅವರನ್ನು ಮನೋರಂಜನೆ ನೀಡುವ ರೀತಿ ಕಾಣಬೇಡಿ ಎಂದು ಬರೆದಿದ್ದಾರೆ.
ಈ ಕುರಿತು ಆಸ್ಟ್ರೇಲಿಯಾ ತಂಡದ ಓಪನರ್ ಡೇವಿಡ್ ವಾನರ್ನರ್ ಇದು ವಿಚಿತ್ರವಾಗಿದ್ದು ಸಹಿಸಲು ಅಸಾಧ್ಯ ಎಂದು ಪ್ರತಿಕ್ರಿಯಿಸಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ನಟಿ ಪರಿಣಿತಿ ಖಂಡಿಸಿದ್ದಾರೆ.