ಭಾರತವು 3 ಪಂದ್ಯಗಳ T-20 ಸರಣಿಯ ನಂತರ ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ಗಳ ಸರಣಿಯನ್ನು ಆಡಲಿದೆ. ಮೊದಲ ಪಂದ್ಯವು ಮಾರ್ಚ್ 4 ರಿಂದ ಮೊಹಾಲಿಯಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶೇಷವಾಗಿದೆ. ಇದು ಅವರ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವಾಗಿದೆ. ಆದರೆ, ಈ ಟೆಸ್ಟ್ ಬಗ್ಗೆ ಹೊಸ ಮಾಹಿತಿ ಸಿಕ್ಕಿದ್ದು, ಕೋವಿಡ್ ಪ್ರೋಟೋಕಾಲ್ ದೃಷ್ಟಿಯಿಂದ ಪ್ರೇಕ್ಷಕರಿಲ್ಲದೆ ಪಂದ್ಯ ನಡೆಯಲಿದೆ. ವಿರಾಟ್ ಕೊಹ್ಲಿ ತಮ್ಮ ಜೀವನದ ಈ ಮಹತ್ವದ ಪಂದ್ಯವನ್ನು ತಮ್ಮ ಅಭಿಮಾನಿಗಳ ಉಪಸ್ಥಿತಿಯಿಲ್ಲದೆ ಆಡಲಿದ್ದಾರೆ.
ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಪ್ರೇಕ್ಷಕರಿಲ್ಲದೆ ನಡೆಯಲಿದೆ. ಕೊಹ್ಲಿ ತಮ್ಮ ಇನ್ನಿಂಗ್ಸ್ನಿಂದ ಈ ಪಂದ್ಯವನ್ನು ಸ್ಮರಣೀಯವಾಗಿಸಲು ಬಯಸುತ್ತಾರೆ. ಈ ಪಂದ್ಯದಲ್ಲಿ ಕೊಹ್ಲಿಗೆ ಟೆಸ್ಟ್ ಪಂದ್ಯದಲ್ಲಿ 8000 ರನ್ ಪೂರೈಸುವ ಅವಕಾಶವಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಕೊಹ್ಲಿ 100ನೇ ಪಂದ್ಯ ಆಡಲಿದ್ದಾರೆ. ರೋಹಿತ್ ಶರ್ಮಾ ಮೊದಲ ಬಾರಿಗೆ ಟೆಸ್ಟ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಫೆಬ್ರವರಿ 19 ರಂದು ರೋಹಿತ್ಗೆ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಯಿತು. ರೋಹಿತ್ ಭಾರತ ತಂಡದ 35ನೇ ಟೆಸ್ಟ್ ನಾಯಕರಾಗಲಿದ್ದಾರೆ. ರೋಹಿತ್ ಬಿಳಿ ಚೆಂಡಿನಲ್ಲಿ ತಮ್ಮ ನಾಯಕತ್ವದ ಮೂಲಕ ಎಲ್ಲರನ್ನೂ ಆಕರ್ಷಿಸಿದ್ದಾರೆ. ಅವರ ಈ ಸಾಧನೆ ಟೆಸ್ಟ್ ಪಂದ್ಯದಲ್ಲೂ ಮುಂದುವರಿಯುವ ನಿರೀಕ್ಷೆಯಿದೆ.
ಕೊಹ್ಲಿ ಇದುವರೆಗೆ 99 ಟೆಸ್ಟ್ ಪಂದ್ಯಗಳಲ್ಲಿ 50.39 ಸರಾಸರಿಯಲ್ಲಿ 27 ಶತಕಗಳನ್ನು ಒಳಗೊಂಡಂತೆ 7,962 ರನ್ ಗಳಿಸಿದ್ದಾರೆ. ಯಾವುದೇ ಆಟಗಾರನಿಗೆ 100ನೇ ಟೆಸ್ಟ್ ಮಹತ್ವದ್ದಾಗಿದೆ. ಹಾಗಾಗಿ ಈ ಟೆಸ್ಟ್ ನಲ್ಲಿ ಕೊಹ್ಲಿ ತಮ್ಮ ಇನ್ನಿಂಗ್ಸ್ ಸ್ಮರಣೀಯವಾಗಿಸಲು ಬಯಸುತ್ತಾರೆ.
ಸರಣಿಯ ಎರಡನೇ ಪಂದ್ಯ ಮಾರ್ಚ್ 12 ರಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ. ಆದರೆ, ಈ ಪಂದ್ಯಕ್ಕೆ ಶೇ.50ರಷ್ಟು ಪ್ರೇಕ್ಷಕರು ಪ್ರವೇಶ ಪಡೆಯಲಿದ್ದಾರೆ ಎಂಬುದು ಅಭಿಮಾನಿಗಳಿಗೆ ಸಂತಸದ ಸುದ್ದಿ.