ಟೀಮ್ ಇಂಡಿಯಾದ ರನ್ ಮಷೀನ್ ವಿರಾಟ್ ಕೊಹ್ಲಿ ಅತ್ಯದ್ಭುತ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ಮೂರು ವರ್ಷಗಳ ಬಳಿಕ ಶತಕ ಸಿಡಿಸಿದ ಸಾಧನೆ ಮಾಡಿದರು.
241ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಶತಕ ಪೂರೈಸಿದರು.ಟೆಸ್ಟ್ ಕ್ರಿಕೆಟ್ನನಲ್ಲಿ 28ನೇ ಟೆಸ್ಟ್ ಶತಕ ಸಿಡಿಸಿದರು. 2019 ನವೆಂಬರ್ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ವೈಟ್ ಜೆರ್ಸಿಯಲ್ಲಿ ಶತಕ ಸಿಡಿಸಿದ್ದರು. ಇದೀಗ 1,204 ದಿನಗಳ ಬಳಿಕ ವಿರಾಟ್ ಅಬ್ಬರಿಸಿದ್ದಾರೆ.
ತವರಿನಲ್ಲಿ ಇದು 14ನೇ ಟೆಸ್ಟ್ ಶತಕ ಇದಾಗಿದೆ.ಒಟ್ಟು 75ನೇ ಅಂತಾರಾಷ್ಟ್ರೀಯ ಶತಕ ಹೊಡೆದಿದ್ದಾರೆ.
ತವರಿನಲ್ಲಿ 14ನೇ ಶತಕ ಸಿಡಿಸಿ ಮಾಜಿ ಆಟಗರರಾದ ಮೊಹ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್, ವೆಂಗ್ ಸರ್ಕಾರ್ ಅವರ ಎಲೈಟ್ ಕ್ಲಬ್ ಸೇರಿದಿದ್ದಾರೆ.
ಇಲ್ಲಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ನಾಲ್ಕನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರೆಸಿದ ವಿರಾಟ್ ಕೊಹ್ಲಿ ಆರಂಭದಲ್ಲಿ ಬಿಗಿ ಬೌಲಿಂಗ್ ದಾಳಿಯಿಂದಾಗಿ ರನ್ ಗಳಿಸಲು ಪರದಾಡಿದರು. ಮೊದಲ ಅವಧಿಯಲ್ಲಿ 29 ರನ್ ಗಳಿಸಲು ಸಾಧ್ಯವಾಯಿತು.
ಬೋಜನ ವಿರಾಮದ ವೇಳೆಗೆ ವಿಕೆಟ್ ಕೀಪರ್ ಕೆಎಸ್ ಭರತ್ ಜೊತೆಗೂಡಿದಾಗ 5ನೇ ವಿಕೆಟ್ಗೆ 84 ರನ್ ಸೇರಿಸಿದರು.
ಕೊಹ್ಲಿ 90ರ ಗಡಿ ದಾಟಿದಾಗ ಅವರಲ್ಲಿ ಒತ್ತಡದಲ್ಲಿ ಇದ್ದಂತೆ ಕಂಡುಬಂದಿಲ್ಲ.