Virat kohli – ಯಾವ ವರ್ಷ ಎಷ್ಟು ಶತಕಗಳು.. ಕೊಹ್ಲಿಯ 27 ಟೆಸ್ಟ್ ಶತಕಗಳ ವಿರಾಟ ದರ್ಶನ..!
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಈಗ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಈ ಮೂಲಕ ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಭಾರತದ 11ನೇ ಆಟಗಾರನಾಗಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. 2011ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿರುವ ವಿರಾಟ್ ಕೊಹ್ಲಿ ಪಾಕಿಸ್ತಾನ ಮತ್ತು ಅಫಘಾನಿಸ್ತಾನವನ್ನು ಹೊರತುಪಡಿಸಿ ಇನ್ನುಳಿದ ತಂಡಗಳ ವಿರುದ್ಧ ಶತಕದ ಸಾಧನೆಯನ್ನು ಮಾಡಿದ್ದಾರೆ. Virat Kohli test centuries- India batting maestro’s career since 2011
ಆಟಗಾರನಾಗಿ ತಂಡದ ನಾಯಕನಾಗಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಕೊಹ್ಲಿ ಎದುರಾಳಿ ತಂಡದ ಬೌಲರ್ ಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಕಳೆದ 99 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 7962 ರನ್ ಕಲೆ ಹಾಕಿದ್ದಾರೆ. 27 ಶತಕಗಳು ಹಾಗೂ 28 ಅರ್ಧಶತಕಗಳಿವೆ.
ನಾಯಕನಾಗಿ ವಿರಾಟ್ ಕೊಹ್ಲಿ
ಪಂದ್ಯಗಳು – 68
ಗೆಲುವು – 40
ಸೋಲು – 17
ಡ್ರಾ – 11
ನಾಯಕನಾಗಿ ವಿರಾಟ್ ಕೊಹ್ಲಿ 68 ಪಂದ್ಯಗಳಲ್ಲಿ 40 ಪಂದ್ಯಗಳನ್ನು ಗೆದ್ದಿದ್ದಾರೆ. 17 ಪಂದ್ಯಗಳಲ್ಲಿ ಸೋತಿದ್ದಾರೆ. 11 ಪಂದ್ಯಗಳು ಡ್ರಾಗೊಂಡಿವೆ.
ಶತಕಗಳ ಪಂದ್ಯದಲ್ಲಿ ಸೋಲು -ಗೆಲುವಿನ ಲೆಕ್ಕಾಚಾರಗಳು
13 ಗೆಲುವು
7 – ಸೋಲು
7 – ಡ್ರಾ
ಇನ್ನು ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದ 13 ಪಂದ್ಯಗಳನ್ನು ಟೀಮ್ ಇಂಡಿಯಾ ಗೆದ್ದಿದೆ. ಸೋತಿದ್ದು ಕೇವಲ ಏಳು ಪಂದ್ಯಗಳನ್ನು ಮಾತ್ರ. ಇನ್ನುಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ತವರು ಮತ್ತು ವಿದೇಶಿ ನೆಲದ ಶತಕಗಳು
ತವರಿನಲ್ಲಿ ದಾಖಲಿಸಿದ್ದ ಶತಕಗಳು – 13
ವಿದೇಶದಲ್ಲಿ ದಾಖಲಿಸಿದ್ದ ಶತಕಗಳು – 14
ದ್ವಿಶತಕಗಳು – 7
ತವರಿನಲ್ಲೇ ಆರು ದ್ವಿಶತಕಗಳು
ವಿದೇಶಿ ನೆಲದಲ್ಲಿ ಒಂದು ದ್ವಿಶತಕ
ಹಾಗೇ ವಿರಾಟ್ ಕೊಹ್ಲಿ ವಿದೇಶಿ ನೆಲದಲ್ಲೇ ಅತೀ ಹೆಚ್ಚು ಶತಕಗಳನ್ನು ದಾಖಲಿಸಿದ್ದಾರೆ. 27 ಶತಕಗಳಲ್ಲಿ 14 ಶತಕಗಳನ್ನು ವಿದೇಶಿ ನೆಲದಲ್ಲಿ ಸಿಡಿಸಿದ್ದಾರೆ. 13 ಶತಕಗಳು ಭಾರತದ ಅಂಗಣದಲ್ಲಿ ದಾಖಲಾಗಿವೆ. ಹಾಗೇ 27 ಶತಕಗಳಲ್ಲಿ ಏಳು ಶತಕಗಳಿವೆ. ಇದರಲ್ಲಿ ಆರು ದ್ವಿಶತಕಗಳು ಭಾರತದಲ್ಲಿ ಮತ್ತು ಒಂದು ದ್ವಿಶತಕ ಭಾರತದ ಅಂಗಣದಲ್ಲಿ ದಾಖಲಾಗಿದೆ
ಗರಿಷ್ಠ ಶತಕ ದಾಖಲಿಸಿದ್ದ ಎದುರಾಳಿ ತಂಡಗಳು
ಆಸ್ಟ್ರೇಲಿಯಾ ವಿರುದ್ಧದ ಶತಕಗಳು – 7
ಇಂಗ್ಲೆಂಡ್ ವಿರುದ್ಧದ ಶತಕಗಳು – 5
ಶ್ರೀಲಂಕಾ ವಿರುದ್ದದ ಶತಕಗಳು – 5
ನ್ಯೂಜಿಲೆಂಡ್ ವಿರುದ್ಧದ ಶತಕಗಳು – 3
ದಕ್ಷಿಣ ಆಫ್ರಿಕಾ ವಿರುದ್ಧದ ಶತಕಗಳು – 3
ಬಾಂಗ್ಲಾದೇಶ ವಿರುದ್ಧದ ಶತಕಗಳು – 2
ವೆಸ್ಟ್ ಇಂಡೀಸ್ ವಿರುದ್ದದ ಶತಕಗಳು – 2
ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಏಳು ಶತಕಗಳನ್ನು ಸಿಡಿಸಿದ್ದಾರೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ದ ತಲಾ ಐದು ಶತಕಗಳು, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ವಿರುದ್ಧ ತಲಾ ಮೂರು ಶತಕಗಳು, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ 2 ಶತಕಗಳನ್ನು ದಾಖಲಿಸಿದ್ದಾರೆ.
2017 – 5 ಶತಕಗಳು
2018- 5 ಶತಕಗಳು
2014- 4 ಶತಕಗಳು
2016- 4 ಶತಕಗಳು
2012 – 3 ಶತಕಗಳು
2013- 2 ಶತಕಗಳು
2015- 2 ಶತಕಗಳು
2019 – 2 ಶತಕಗಳು
2017 ಮತ್ತು 2018ರಲ್ಲಿ ತಲಾ ಐದು ಶತಕಗಳನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. 2016 ಮತ್ತು 2014ರಲ್ಲಿ ತಲಾ ನಾಲ್ಕು ಶತಕಗಳನ್ನು ಸಿಡಿಸಿದ್ದಾರೆ. 2012ರಲ್ಲಿ ಮೂರು ಶತಕ, 2013 ಹಾಗೂ 2015 ಮತ್ತು 2019ರಲ್ಲಿ ತಲಾ ಎರಡು ಶತಕಗಳನ್ನು ಬಾರಿಸಿದ್ದಾರೆ. ಆದ್ರೆ 2019ರ ನಂತರ ವಿರಾಟ್ ಬ್ಯಾಟ್ ನಿಂದ ಶತಕ ಸಿಡಿದಿಲ್ಲ. ಇದೀಗ ನೂರನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಿಸಲಿ ಅನ್ನೋದು ಅಭಿಮಾನಿಗಳ ಹಾರೈಕೆಯಾಗಿದೆ.