T20 WorldCup- ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದಿಗ್ಗಜರು ಅಭಿನಂದಿಸಿದ್ದಾರೆ.
ಐತಿಹಾಸಿಕ ಮೆಲ್ಬೋರ್ನ್ ಮೈದಾನದಲ್ಲಿ 160 ಚೇಸ್ ಮಾಡಿದ ಟೀಮ್ ಇಂಡಿಯಾ ಪಂದ್ಯದ ಕೊನೆಯ ಎಸೆತದಲ್ಲಿ 4 ವಿಕೆಟ್ ಗಳ ರೋಚಕ ಗೆಲುವು ದಾಖಲಿಸಿತು.
ವಿರಾಟ್ ಕೊಹ್ಲಿಯ ವಿರಾಟ್ ರೂಪ ನೋಡಿ ಕ್ರಿಕೆಟ್ ದಿಗ್ಗಜರು ಸಲಾಂ ಹೊಡೆದಿದ್ದಾರೆ. ಬರೋಬ್ಬರಿ 364 ದಿನಗಳ ನಂತರ ಪಾಕ್ ವಿರುದ್ಧ ಭಾರತ ಗೆದ್ದು ಸೇಡು ತೀರಿಸಿಕೊಂಡಿದೆ.
ಗೆಳೆಯ, ಈ ಇನ್ನಿಂಗ್ಸ್ ಅತ್ಯದ್ಭುತವಾಗಿತ್ತು. ಶ್ರೇಷ್ಠಗಳಲ್ಲೆ ಇದು ಶ್ರೇಷ್ಠ ಎಂದು ಮಿಸ್ಟರ್ 360 ಎಬಿಡಿ ವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.
ನನ್ನ ಪ್ರಕಾರ ವಿರಾಟ್ ಎಂದೂ ಔಟ್ ಆಫ್ ಫಾರ್ಮ್ ಇರಲಿಲ್ಲ. ಜನರ ನಿರೀಕ್ಷೆ ಹೆಚ್ಚಿತ್ತು.ಆತ ಅರ್ಧ ಶತಕ ದಾಖಲಿಸಿದರೂ ಶತಕದ ನಿರೀಕ್ಷೆ ಮಾಡುತ್ತಿದ್ದರು ಅಷ್ಟೆ. ಆದರೆ ನಿನ್ನೆಯ ಇನ್ನಿಂಗ್ಸ್ ಎಲ್ಲರ ಅನುಮಾನಕ್ಕೆ ಉತ್ತರವಾಗಿತ್ತು ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಭಾರತ ತಂಡ ಹೋರಾಡಿ ಒಳ್ಳೆಯ ಗೆಲುವನ್ನು ದಾಖಲಿಸಿದೆ. ಅತ್ಯುತ್ತಮ ಪ್ರದರ್ಶನಕ್ಕೆ ಅಭಿನಂದನೆಗಳು. ವಿಶೇವಾಗಿ ವಿರಾಟ್ ಕೊಹ್ಲಿ ದೃಢತೆಯಿಂದ ಇನ್ನಿಂಗ್ಸ್ ಕಟ್ಟಿದಕ್ಕೆ. ಮುಂದಿನ ಸವಾಲುಗಳಿಗೂ ಶುಭ ಹಾರೈಕೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಏಲಿಯನ್ಗಳು ನಮ್ಮ ಬಳಿಯೇ ಓಡಾಡುತ್ತಿರುತ್ತವೆ. ವಿರಾಟ್ ಕೂಡ ಏಲಿಯನ್. ಆಧುನಿಕ ಕ್ರಿಕೆಟ್ನಲ್ಲಿ ನಾನು ನೋಡಿದ ಅತ್ಯುತ್ತಮ ಕ್ರಿಕೆಟಿಗ.
ಕಳೆದ 15 ವರ್ಷಗಳಿಂದ ರನ್ ಗಳಿಸುತ್ತಿದ್ದಾರೆ. ಚೇಸಿಂಗ್ನಲ್ಲೂ ಒಳ್ಳೆಯ ಎವರೇಜ್ ಹೊಂದಿದ್ದಾರೆ ಎಂದು ಪಾಕ್ ತಂಡದ ಮಾಜಿ ನಾಯಕ ವಾಸೀಮ್ ಅಕ್ರಮ್ ಹೇಳಿದ್ದಾರೆ.