Virat Kohli ಟಿ20 ವಿಶ್ವಕಪ್ನಲ್ಲಿ ತಮ್ಮ ದಾಖಲೆಯನ್ನು ಹಿಂದಿಕ್ಕಿದ ರನ್ ಮಷೀನ್ ವಿರಾಟ್ ಕೊಹ್ಲಿಯನ್ನುಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ.
ಬುಧವಾರ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸುವ ಮೂಲಕ ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾದರು.
ಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಟಿ20 ವಿಶ್ವಕಪ್ನಲ್ಲಿ 31 ಇನ್ನಿಂಗ್ಸ್ ಗಳಿಂದ 1016 ರನ್ ಕಲೆ ಹಾಕಿದ್ದಾರೆ. ವಿರಾಟ್ ಕೊಹ್ಲಿ 23 ಇನ್ನಿಂಗ್ಸಳಿಂದ 1065 ರನ್ ಗಳಿಸಿದ್ದಾರೆ.
ಈ ಕುರಿತು ಲಂಕಾ ದಂತಕತೆ ಜಯವರ್ಧನೆ, ದಾಖಲೆಗಳಿರುವುದು ಮುರಿಯುವುದಕ್ಕೆ.ಯಾರಾದರೂ ನನ್ನ ದಾಖಲೆ ಮುರಿಯುತ್ತಾರೆ ಅನ್ನೋದು ಗೊತ್ತಿತ್ತು.ಅದು ವಿರಾಟ್. ನೀವು ಯಾವಾಗಲೂ ಹೋರಾಡುವ ಯೋಧ. ಫಾರ್ಮ್ ತಾತ್ಕಲಿಕಾ. ಕ್ಲಾಸ್ ಶಾಶ್ವತ ಎಂದು ಬರೆದಿದ್ದಾರೆ. ಅಭಿನಂದನೆಗಳು. ವೆ ಡನ್ ಮೇಟ್ ಎಂದುಜಯವರ್ಧನೆ ಹೇಳಿದ್ದಾರೆ.
ವಿರಾಟ್ ಬಾಂಗ್ಲಾ ವಿರುದ್ಧ 8 ಬೌಂಡರಿ 1 ಸಿಕ್ಸರ್ ಸಿಡಿಸಿ 44 ಎಸೆತದಲ್ಲಿ ಅಜೇಯ 64 ರನ್ ಗಳಿಸಿದರು.
ಈ ಮೂಲಕ ಟಿ20 ವಿಶ್ವಕಪ್ನಲ್ಲಿ ವಿರಾಟ್ 12ನೇ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದರು.
ಇದನ್ನೂ ಓದಿ – https://sportskarnataka.com/icc-month-award-…d-for-firts-time/