ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದೇ ಕನಸು. ಟೆಸ್ಟ್ ಆಡುವುದು ಅಂದರೆ ಸೌಭಾಗ್ಯ. 100 ಟೆಸ್ಟ್ ಪಂದ್ಯ ಆಡುವುದು ಅಂದರೆ ಅದು ಅದೃಷ್ಟ. ಅಂತಹ ಅದೃಷ್ಟ ಪಡೆದ ಕೆಲವೇ ಕೆಲವು ಆಟಗಾರರು ಟೀಮ್ ಇಂಡಿಯಾದಲ್ಲಿ ಆಡಿದ್ದಾರೆ.
ಈ ಅದೃಷ್ಟವಂತರ ಲಿಸ್ಟ್ಗೆ ಈಗ ವಿರಾಟ್ ಕೊಹ್ಲಿ ಸೇರ್ಪಡೆಯಾಗುತ್ತಿದ್ದಾರೆ. ಅಂಡರ್ 19 ವಿಶ್ವಕಪ್ ಗೆದ್ದ ನಾಯಕನಾಗಿ, ಯುವ ಆಟಗಾರನಾಗಿ ತಂಡಕ್ಕೆ ಎಂಟ್ರಿಕೊಟ್ಟಿದ್ದ ವಿರಾಟ್, ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿ ನಂಬರ್ ವನ್ ತಂಡವಾಗಿಸಿದ್ದರು. ಈಗ 100ನೇ ಟೆಸ್ಟ್ ಆಡುತ್ತಿದ್ದಾರೆ.
ವಿರಾಟ್ಗೂ ಮುನ್ನ ಭಾರತ 11 ಆಟಗಾರರು ಈ ಸಾಧನೆ ಮಾಡಿದ್ದಾರೆ. ಕ್ರಿಕೆಟ್ ಗಾಡ್ ಸಚಿನ್ ತೆಂಡುಲ್ಕರ್ ಈ ಲಿಸ್ಟ್ನಲ್ಲಿ ವಿಶ್ವದಾಖಲೆ ಹೊಂದಿದ್ದಾರೆ. ಟೀಮ್ ಇಂಡಿಯಾದ ಗುರು ದ್ರಾವಿಡ್ ಕೂಡ ಈ ಲಿಸ್ಟ್ನಲ್ಲಿದ್ದಾರೆ ಅನ್ನುವುದು ವಿಶೇಷ. ಮೊಹಾಲಿಯಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್ ಭಾರತದ ಪರ 100 ಟೆಸ್ಟ್ ಆಡಿದ 12ನೇ ಆಟಗಾರನಾಗಲಿದ್ದಾರೆ.
ಆಟಗಾರ ಆಡಿದ ಟೆಸ್ಟ್
ಸಚಿನ್ ತೆಂಡುಲ್ಕರ್ 200
ರಾಹುಲ್ ದ್ರಾವಿಡ್ 163
ವಿವಿಎಸ್ ಲಕ್ಷ್ಮಣ್ 134
ಅನಿಲ್ ಕುಂಬ್ಳೆ 132
ಕಪಿಲ್ ದೇವ್ 131
ಸುನೀಲ್ ಗವಾಸ್ಕರ್ 125
ದಿಲೀಪ್ ವೆಂಗ್ಸರ್ಕಾರ್ 116
ಸೌರವ್ ಗಂಗೂಲಿ 113
ಇಶಾಂತ್ ಶರ್ಮಾ 105
ಹರ್ಭಜನ್ ಸಿಂಗ್ 103
ವೀರೇಂದ್ರ ಸೆಹ್ವಾಗ್ 103